ADVERTISEMENT

ಎಲ್ಲ ಸಮುದಾಯಗಳಿಗೂ ಮಾದರಿ ನಡೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 19:30 IST
Last Updated 24 ನವೆಂಬರ್ 2022, 19:30 IST

‘ಭಯೋತ್ಪಾದಕರನ್ನು ಮುಸ್ಲಿಂ ಸಮುದಾಯದಿಂದ ಬಹಿಷ್ಕರಿಸಿ’ ಎಂದು ರಾಜ್ಯ ವಕ್ಫ್ ಕಮಿಟಿಗೆ ಉಮ್ಮತ್ ಚಿಂತಕರ ವೇದಿಕೆ ಮನವಿ ಸಲ್ಲಿಸಿರುವುದು (ಪ್ರ.ವಾ., ನ. 23) ಪ್ರಶಂಸನೀಯ. ಎಲ್ಲ ಸಮುದಾಯಗಳಲ್ಲೂ ಒಳ್ಳೆಯವರು ಹಾಗೂ ಕೆಟ್ಟವರು ಹೀಗೆ ಎರಡು ರೀತಿಯ ಜನರೂ ಇರುತ್ತಾರೆ. ಎಲ್ಲ ಧರ್ಮ, ಜಾತಿಗಳಲ್ಲೂ ಬಹುತೇಕರು ಯಾವುದರ ಗೊಡವೆಗೂ ಹೋಗದೆ ವೈಯಕ್ತಿಕ ಬದುಕಿನಲ್ಲೇ ನೆಮ್ಮದಿಯನ್ನು ಕಂಡುಕೊಳ್ಳುವ ಮನಃಸ್ಥಿತಿಯನ್ನು ಉಳ್ಳವರಾಗಿರುತ್ತಾರೆ.

ಯಾರೋ ಕೆಲವರು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದಾರೆಂಬ ಕಾರಣಕ್ಕೆ ಆ ಇಡೀ ಸಮುದಾಯವನ್ನೇ ದ್ವೇಷಿಸುವ ಕೆಲಸವನ್ನು ಯಾರೂ ಮಾಡಬಾರದು. ಉಮ್ಮತ್ ಚಿಂತಕರ ವೇದಿಕೆಯ ಈ ನಡೆ ಎಲ್ಲ ಸಮುದಾಯದವರಿಗೂ ಮಾದರಿಯಾಗಬೇಕು.

⇒ಚಾವಲ್ಮನೆ ಸುರೇಶ್ ನಾಯಕ್,ಹಾಲ್ಮತ್ತೂರ್, ಕೊಪ್ಪ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.