ADVERTISEMENT

ಅವರು ಮಾತ್ರ ಸಮರ್ಥರೇ?

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 20:00 IST
Last Updated 22 ಜನವರಿ 2019, 20:00 IST

ನಿವೃತ್ತಿ ವಯಸ್ಸು ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಗೆ ಕ್ರಮವಾಗಿ 62 ಹಾಗೂ 65 ವರ್ಷ, ವಿಶ್ವವಿದ್ಯಾಲಯಗಳ ಉಪನ್ಯಾಸಕರಿಗೆ 62 ವರ್ಷ ಇದೆ. ಆದರೆ, ಇತರ ಸರ್ಕಾರಿ ನೌಕರರಿಗೆ 60 ವರ್ಷವನ್ನು ನಿವೃತ್ತಿ ವಯಸ್ಸೆಂದು ನಿಗದಿ ಮಾಡಲಾಗಿದೆ. ಏಕೆ ಈ ತಾರತಮ್ಯ?

ವೈದ್ಯಕೀಯ ಸೌಲಭ್ಯಗಳು ಹೆಚ್ಚಿರುವ ಪರಿಣಾಮ ಇಂದು ವ್ಯಕ್ತಿಯ ಜೀವಿತಾವಧಿ ಮತ್ತು ಕೆಲಸದ ಸಾಮರ್ಥ್ಯ ಹೆಚ್ಚಾಗಿದೆ. ನ್ಯಾಯಮೂರ್ತಿಗಳಿಗೆ ಮತ್ತು ವಿಶ್ವವಿದ್ಯಾಲಯಗಳ ಉಪನ್ಯಾಸಕರಿಗೆ ಮಾತ್ರ ಈ ಸಾಮರ್ಥ್ಯ ಇರುತ್ತದೆ ಎಂದು ಸರ್ಕಾರ ಭಾವಿಸಿದೆಯೇ? ಕುಮಾರಸ್ವಾಮಿ ನೇತೃತ್ವದ ಸರ್ಕಾರವಾದರೂ ಈ ತಾರತಮ್ಯವನ್ನು ನೀಗಿಸಿ, ಎಲ್ಲರಿಗೂ ಅನ್ವಯವಾಗುವಂತೆ ನಿವೃತ್ತಿ ವಯಸ್ಸನ್ನು ಏರಿಸಲಿ.

ಶಂಕರಗೌಡ ಬಿರಾದಾರ, ಮುಳಸಾವಳಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.