ADVERTISEMENT

ವಾಚಕರ ವಾಣಿ | ಮನಸ್ಸಿನ ಮಾಲಿನ್ಯಕ್ಕೆ ಬೇಕಿದೆ ಮದ್ದು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 19:05 IST
Last Updated 15 ಆಗಸ್ಟ್ 2022, 19:05 IST

ರಾಜಸ್ಥಾನದ ಹಳ್ಳಿಯೊಂದರ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ, ಪರಿಶಿಷ್ಟ ಸಮುದಾಯಕ್ಕೆ ಸೇರಿದ ಬಾಲಕ ಕುಡಿಯುವ ನೀರಿನ ಮಡಕೆ ಮುಟ್ಟಿದ ಎನ್ನುವ ಕಾರಣಕ್ಕೆ ಶಿಕ್ಷಕರೊಬ್ಬರು ಅವನನ್ನು ಥಳಿಸಿದ್ದರು. ಅದರಿಂದ ಬಾಲಕ ಮೃತನಾದನೆಂದು ವರದಿಯಾಗಿದೆ (ಪ್ರ.ವಾ., ಆ. 15). ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ನಡೆದಿರುವ ಈ ಅಮಾನವೀಯ ಕೃತ್ಯವು ಅನೇಕ ಪ್ರಶ್ನೆಗಳನ್ನು ನಮ್ಮ ಮುಂದೆ ಇಡುತ್ತದೆ. ಸ್ವಾತಂತ್ರ್ಯ ಸಿಕ್ಕಿರುವುದು ಯಾರಿಗೆ ಎಂಬ ಪ್ರಶ್ನೆ ಅದರಲ್ಲಿ ಮುಖ್ಯವಾದುದು.

‘ನನ್ನ ಜಾತಿಯೇ ಶ್ರೇಷ್ಠ, ನನ್ನ ಧರ್ಮವೇ ಶ್ರೇಷ್ಠ’ ಎಂಬ ಶ್ರೇಷ್ಠತೆಯ ವ್ಯಸನಗಳೇ ಎಲ್ಲ ಸಮಸ್ಯೆಗಳ ಮೂಲ. ಪ್ರಬಲ ಜಾತಿಯ ಜನರಿಗೆ ದುರ್ಬಲರನ್ನು ಹೊಡೆಯಲು, ಕೊಲ್ಲಲು ಯಾವುದೋ ಒಂದು ನೆವ ಸಿಕ್ಕರೆ ಸಾಕು. ಪರಿಶಿಷ್ಟ ಸಮುದಾಯದ ಮಕ್ಕಳು ಬಯಲು ಶೌಚ ಮಾಡಿದರೆಂಬ ಕಾರಣಕ್ಕೆ, ಪರಿಶಿಷ್ಟ ವಿದ್ಯಾರ್ಥಿ ಹೆಚ್ಚು ಅಂಕಗಳನ್ನು ಗಳಿಸಿದನೆಂಬ ಕಾರಣಕ್ಕೆ ಹಲ್ಲೆ, ಕೊಲೆ ಆಗಿರುವ ನಿದರ್ಶನಗಳು ಇವೆ. ಈ ಎಲ್ಲ ಸಮಸ್ಯೆಗಳ ನಿವಾರಣೆಯು ‍ಪ್ರಬಲರು ತಮ್ಮ ಮಲಿನವಾಗಿರುವ ಮನಸ್ಸನ್ನು ಶುದ್ಧೀಕರಿಸಿಕೊಳ್ಳುವುದರಿಂದ ಮಾತ್ರ ಸಾಧ್ಯ.
–ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT