ADVERTISEMENT

ದೇಶದಾದ್ಯಂತ ಖಂಡನೆ ವ್ಯಕ್ತವಾಗಲಿ

ರುದ್ರಮೂರ್ತಿ ಎಂ.ಜೆ.ಚಿತ್ರದುರ್ಗ
Published 2 ಜುಲೈ 2019, 18:30 IST
Last Updated 2 ಜುಲೈ 2019, 18:30 IST

ಶಾಸಕರೊಬ್ಬರ ಸಹೋದರನಿಂದ ಹಲ್ಲೆಗೊಳಗಾಗಿರುವ ತೆಲಂಗಾಣದ ವಲಯ ಅರಣ್ಯಾಧಿಕಾರಿ ಸಿ.ಅನಿತಾ ತಮಗೆ ಜೀವಭಯ ಇರುವುದಾಗಿ ಹೇಳಿದ್ದಾರೆ (ಪ್ರ.ವಾ., ಜುಲೈ 2).

ತಾವು ಹಲ್ಲೆ ನಡೆಸಿದ ಸ್ಥಳವು ಅರಣ್ಯ ಇಲಾಖೆಗೆ ಸೇರಿದ್ದಲ್ಲ ತಮ್ಮದು ಎಂದಾದರೆ, ಅದನ್ನು ಸಾಬೀತುಪಡಿಸಲು ಶಾಸಕರ ಸಹೋದರ ಕಾನೂನಿನ ಮೊರೆ ಹೋಗಬಹುದು. ಅದು ಬಿಟ್ಟು ಕರ್ತವ್ಯನಿರತ ಅಧಿಕಾರಿಯ ಮೇಲೆ ದೌರ್ಜನ್ಯ ನಡೆಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಈ ಘಟನೆಯ ವಿರುದ್ಧ ಬರೀ ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿಭಟಿಸಿದರೆ ಸಾಲದು. ಇಡೀ ದೇಶದ ಜನ ಇದನ್ನು ಖಂಡಿಸಬೇಕು. ಮಹಿಳೆಯರು ನಿರುಮ್ಮಳರಾಗಿ ಆಯಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವಂತೆ ಮಾಡುವ ಹೊಣೆ ಎಲ್ಲಾ ಪ್ರಜ್ಞಾವಂತರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT