ADVERTISEMENT

ಆರ್ಥಿಕತೆಯ ಮೇಲೆ ಬರೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 22:43 IST
Last Updated 17 ಫೆಬ್ರುವರಿ 2021, 22:43 IST

ಗೋಹತ್ಯೆ ನಿಷೇಧ ಕಾನೂನಿನ ಪರಿಣಾಮವು ಅದು ಜಾರಿಗೆ ಬಂದ ಕೆಲ ದಿನಗಳಲ್ಲಿಯೇ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ರೈತರ ಆರ್ಥಿಕತೆಯ ಮೇಲೆ ಬರೆ ಎಳೆದಿದೆ. ನಷ್ಟದ ಕೃಷಿಯ ನಡುವೆಯೂ ದೇಶದ ಬಹುತೇಕ ಸಣ್ಣ ರೈತರು ಇಂದಿಗೂ ಉಸಿರಾಡುತ್ತಿದ್ದರೆ ಅದಕ್ಕೆ ಹಸುಗಳು ಕಾರಣ.

ಹಸುಗಳ ದರ ಗಣನೀಯವಾಗಿ ಬಿದ್ದುಹೋಗಿದೆ. ಇದಲ್ಲದೆ, ಹಸುಗಳ ಮಾರಾಟವನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ. ಮೊದಲು ಗ್ರಾಮಲೆಕ್ಕಿಗನಿಂದ ಅನುಮತಿ, ಪಹಣಿಯ ಪ್ರತಿ, ದಾರಿಯುದ್ದಕ್ಕೂ ಪೊಲೀಸರಿಗೆ ಲಂಚ, ತಿರುಗಿ ಯಾರಿಗೆ ಮಾರಲಾಗಿದೆ ಎಂಬ ಮಾಹಿತಿಯನ್ನು ರೈತರು ನೀಡಬೇಕಾಗಿದೆ.

ಹೋರಿಗಳನ್ನು ಕೊಳ್ಳುವವರಿಲ್ಲದೆ ಹೊರೆ ತಗ್ಗಿಸಿಕೊಳ್ಳಲು ರಸ್ತೆಗಳಿಗೆ ಬಿಡಲಾಗುತ್ತಿದೆ. ಮೈಸೂರು ರಸ್ತೆಯಲ್ಲಿ ಹೋದವರಿಗೆ ಈ ಹೋರಿಗಳ ಟ್ರಾಫಿಕ್ ಅರಿವಿಗೆ ಬಂದಿರಬೇಕು. ಭಾನುವಾರ ಮೈಸೂರಿನ ಮುಡುಕುತೊರೆ ದನದ ಜಾತ್ರೆಯಲ್ಲಿ ರಾಸುಗಳನ್ನು ಮಾರಲು ಬಂದ ರೈತರು ಕಣ್ಣೀರು ಹಾಕುತ್ತಿದ್ದುದನ್ನು ಸ್ನೇಹಿತರು ಹಂಚಿಕೊಂಡರು.

ADVERTISEMENT

ಕರ್ನಾಟಕದ ಬಹುತೇಕ ರೈತರದ್ದು ಇದೇ ಅಳಲು. ಹೋರಾಟದ ಹಿನ್ನೆಲೆಯಿಂದ ಬಂದಿರುವ ಮುಖ್ಯಮಂತ್ರಿ, ಕಾಯ್ದೆ ಜಾರಿಗೆ ತರುವ ಮುನ್ನ ರೈತರ ಇಂತಹ ಸಂಕಷ್ಟಗಳನ್ನು ಪರಿಗಣಿಸದೇ ಹೋದದ್ದು ದುರದೃಷ್ಟಕರ.
-ಶಾಂತರಾಜು ಎಸ್. ಮಳವಳ್ಳಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.