ADVERTISEMENT

ಪೂರಕ ವಾತಾವರಣ ಸೃಷ್ಟಿಸಬೇಕಿದೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2022, 19:45 IST
Last Updated 3 ನವೆಂಬರ್ 2022, 19:45 IST

ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ನಿಯತಕಾಲಿಕೆಗಳ ಪ್ರಸರಣ ಸಂಖ್ಯೆ ಹೆಚ್ಚಬೇಕು ಎಂದು ಬಿ.ಎಸ್‌. ಭಗವಾನ್‌ ಹೇಳಿರುವುದು (ಸಂಗತ, ನ. 3) ಸೂಕ್ತವಾದ ಸಲಹೆ. ವಿಜ್ಞಾನ ಪತ್ರಿಕೆಗಳನ್ನು ಓದಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕು. ವಿಜ್ಞಾನಕ್ಕೆ ಸಂಬಂಧಿಸಿದ ಲೇಖನ ಬರೆಯುವುದಕ್ಕೆ ಬೇಕಾದ ಅಗತ್ಯ ತರಬೇತಿಗಳನ್ನು ಕಲ್ಪಿಸಬೇಕು. ಶಾಲಾ- ಕಾಲೇಜುಗಳಲ್ಲಿ ವಿಜ್ಞಾನ ಶಿಕ್ಷಕರು ಆಸಕ್ತಿಯಿಂದ ಜನಪ್ರಿಯ ವಿಜ್ಞಾನ ಲೇಖನಗಳನ್ನು ಪ್ರಕಟಿಸು
ವಂತಾದರೆ ವಿದ್ಯಾರ್ಥಿಗಳಿಗೆ ಅದರಿಂದ ಮತ್ತಷ್ಟು ಪ್ರೇರಣೆ ದೊರೆಯುತ್ತದೆ.

ಇದರಿಂದಾಗಿ ಕ್ರಮೇಣ ಸಾಮಾನ್ಯ ಓದುಗರಿಗೂ ವಿಜ್ಞಾನ-ತಂತ್ರಜ್ಞಾನದ ಪಠ್ಯ ಲಭ್ಯವಾಗಿ, ವಿಜ್ಞಾನದಲ್ಲಿ ಆಸಕ್ತಿ ಉಂಟಾದರೆ ಅಜ್ಞಾನ ಅಳಿಯುತ್ತದೆ. ವಿಜ್ಞಾನ- ತಂತ್ರಜ್ಞಾನ ಕೋರ್ಸುಗಳಲ್ಲಿ ಕನ್ನಡದಲ್ಲಿ ಶೈಕ್ಷಣಿಕ ಬೋಧನೆ ಮತ್ತು ಸಂಶೋಧನೆಗಳಿಗೆ ಪೂರಕ ವಾತಾವರಣವನ್ನು ಸಹ ಸೃಷ್ಟಿಸಿದಂತಾಗುತ್ತದೆ.

-ಡಾ. ಜಿ. ಬೈರೇಗೌಡ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.