ADVERTISEMENT

ನಂಬಿಕೆಗೆ ಸೂಕ್ತವಾದ ಸ್ಥಳ ಇರಲಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 17:40 IST
Last Updated 24 ಅಕ್ಟೋಬರ್ 2019, 17:40 IST

‘ಸರ್ಕಾರಿ ಆಸ್ಪತ್ರೆಗಳಲ್ಲಿ ದೇವಾಲಯಗಳನ್ನು ನಿರ್ಮಿಸುವುದರಿಂದ ಪಾಸಿಟಿವ್ ಎನರ್ಜಿ ಸಿಗುತ್ತದೆ’ ಎಂಬ ಆರೋಗ್ಯ ಸಚಿವರ ಹೇಳಿಕೆಗೆ ಅಪಾರ್ಥ ಕಲ್ಪಿಸುವುದು ಬೇಡ. ಏಕೆಂದರೆ ಜನಸಾಮಾನ್ಯರು ಆಸ್ಪತ್ರೆಗೆ ಬರುವ ಮೊದಲು ಅಥವಾ ಬಂದ ನಂತರ ಸಾಮಾನ್ಯವಾಗಿ ವೈದ್ಯರಿಗಿಂತ ಹೆಚ್ಚಾಗಿ ದೇವರ ಮೇಲೆ ನಂಬಿಕೆ ಇಟ್ಟು ಪ್ರಾರ್ಥಿಸುತ್ತಾರೆ. ನಂಬಿಕೆ ಎಂದರೆ ಒಂದು ಶಕ್ತಿ. ನಮ್ಮ ಕಷ್ಟಕಾರ್ಪಣ್ಯಗಳನ್ನು ಹಂಚಿಕೊಳ್ಳಲು ಒಂದು ಸೂಕ್ತವಾದ ಸ್ಥಳದ ಅವಶ್ಯಕತೆ ಇರುತ್ತದೆ. ಕೊನೇಪಕ್ಷ ಆ ಸ್ಥಳ ನಮ್ಮಲ್ಲಿನ ನಕಾರಾತ್ಮಕ ಅಂಶಗಳನ್ನು ತೆಗೆದು ಅಲ್ಪಸ್ವಲ್ಪವಾದರೂ ಆ ಮಟ್ಟಿಗೆ ಸಮಾಧಾನ ನೀಡಿ ಧೈರ್ಯ ತುಂಬುವ ಕೆಲಸ ಮಾಡುತ್ತದೆ. ಹಾಗೆಂದು, ದೇವಾಲಯ ಇದ್ದ ಮಾತ್ರಕ್ಕೆ ನೂರಕ್ಕೆ ನೂರರಷ್ಟು ಪಾಸಿಟಿವ್ ಎನರ್ಜಿ ಸಿಗುತ್ತದೆ ಎಂದಲ್ಲ. ಆಸ್ಪತ್ರೆಗಳಲ್ಲಿನ ಮೂಲಸೌಕರ್ಯ ವ್ಯವಸ್ಥೆ, ಶುಚಿತ್ವ, ಉತ್ತಮ ಪರಿಸರ ಹಾಗೂ ಗುಣಮಟ್ಟದ ಚಿಕಿತ್ಸೆ ಇದ್ದರೆ ಪಾಸಿಟಿವ್ ಎನರ್ಜಿ ತಾನಾಗಿಯೇ ಬರುತ್ತದೆ.

ಮುರುಗೇಶ ಡಿ.,ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT