ADVERTISEMENT

ಅಭಿನಂದನಾರ್ಹ ಜನಪ್ರತಿನಿಧಿಗಳು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 19:51 IST
Last Updated 27 ನವೆಂಬರ್ 2020, 19:51 IST

ಮಳೆಗಾಲದಲ್ಲೂ ನೀರು ಕಾಣದ, ಕುಡಿಯಲು ಸಹ ನೀರು ಸಿಗದಿದ್ದ ವಿಜಯಪುರ ಜಿಲ್ಲೆಯ ಕಾರಜೋಳದಂಥ ಕುಗ್ರಾಮದಲ್ಲಿ ಈಗ ಬೇಸಿಗೆಯಲ್ಲೂ ನೀರು ಉಕ್ಕಿ ಹರಿಯುತ್ತಿರುವುದನ್ನು ತಿಳಿದು (ಪ್ರ.ವಾ., ನ. 27) ಸಂತಸವಾಯಿತು. ಇದಕ್ಕೆ ಕಾರಣರಾದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಆ ಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ ಅಭಿನಂದನಾರ್ಹರು.

ಉಪಮುಖ್ಯಮಂತ್ರಿ ತಮ್ಮ ಮತಕ್ಷೇತ್ರವಲ್ಲದಿದ್ದರೂ ಹುಟ್ಟೂರು ಎಂಬ ಕಾರಣಕ್ಕಾಗಿ ಗ್ರಾಮದ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅಲ್ಲಿನ ಜನರ ಸಮಸ್ಯೆಗೆ ಸ್ಪಂದಿಸಿರುವುದು ಶ್ಲಾಘನೀಯ.

ಇದೇ ರೀತಿಯ ಸಮಸ್ಯೆಗಳನ್ನು ಅನೇಕ ಗ್ರಾಮಗಳು ಎದುರಿಸುತ್ತಿವೆ. ಸರ್ಕಾರದ ಯೋಜನೆಗಳು, ಸೌಲಭ್ಯಗಳನ್ನು ಗ್ರಾಮಗಳಿಗೆ ತಲುಪಿಸಿ, ಸಮಸ್ಯೆಗೆ ಪರಿಹಾರ ದೊರಕಿಸುವ ಕಾರ್ಯವನ್ನು ಆಯಾ ಕ್ಷೇತ್ರದ ಶಾಸಕರು ಮತ್ತು ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸುವಂತೆ ಆಗಬೇಕು. ಆಗ ಈ ಎಲ್ಲ ಗ್ರಾಮಗಳ ಜನರೂ ಕಾರಜೋಳ ಗ್ರಾಮಸ್ಥರಂತೆ ನೆಮ್ಮದಿಯಿಂದ ಬದುಕಲು ಸಾಧ್ಯ.
-ಬಿ.ಎಸ್.ಚೈತ್ರ, ಚಿತ್ರದುರ್ಗ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.