ADVERTISEMENT

ಸಂವಿಧಾನಾತ್ಮಕ ಸಂಬಂಧ ಸಿದ್ಧಿಸಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 30 ನವೆಂಬರ್ 2020, 18:12 IST
Last Updated 30 ನವೆಂಬರ್ 2020, 18:12 IST

ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳ ನಡುವೆ ಜಟಾಪಟಿ ಸಲ್ಲದು ಎಂದು ಕೆ.ವಿ.ವಾಸು ಅಭಿಪ್ರಾಯಪಟ್ಟಿದ್ದಾರೆ (ವಾ.ವಾ., ನ. 30). ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್‌ ಹಾಗೂ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಡುವೆ ನಡೆಯುತ್ತಿರುವ ಜಟಾಪಟಿಯನ್ನು ವಿವರಿಸಿ, ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳು ಪರಸ್ಪರ ಹೊಂದಿಕೊಂಡು ಕೆಲಸ ಮಾಡಬೇಕಾದದ್ದು ಅತ್ಯಗತ್ಯ ಎಂದಿದ್ದಾರೆ. ಅದೇ ದಿನದ ವಾಚಕರವಾಣಿಯ ಮತ್ತೊಂದು ಪತ್ರದಲ್ಲಿ ಪ್ರೊ. ಬಿ.ಕೆ.ಚಂದ್ರಶೇಖರ್‌ ಅವರು, ‘ನ್ಯಾಯಾಂಗ ಮತ್ತು ಶಾಸಕಾಂಗದ ನಡುವಿನ ಸಂಬಂಧವು ಸಂವಿಧಾನಕ್ಕೆ ಅನುಗುಣವಾಗಿ ಇರಬೇಕೇ ಹೊರತು ಸೌಹಾರ್ದಯುತವಾಗಿ ಅಲ್ಲ’ ಎಂಬ, ನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ ಅವರ ಹೇಳಿಕೆಯನ್ನು ಉದಾಹರಿಸಿದ್ದಾರೆ.

ಈ ಎರಡೂ ಅಭಿಪ್ರಾಯಗಳನ್ನು ಗಮನಿಸಿದಾಗ, ಜನಪ್ರತಿನಿಧಿಗಳು, ನೌಕರರು, ನ್ಯಾಯಮೂರ್ತಿಗಳು ಯಾರೇ ಇರಲಿ ಅವರಿಗೆ ಪ್ರತಿಷ್ಠೆ ಮುಖ್ಯವಾಗಬಾರದು ಎಂಬುದು ಮನದಟ್ಟಾಗುತ್ತದೆ. ಭಾವನಾತ್ಮಕ ಸಂಬಂಧ ಇಲ್ಲವೇ ರಕ್ತಸಂಬಂಧವನ್ನು ಮೀರಿ ಸಂವಿಧಾನಾತ್ಮಕ ಸಂಬಂಧದೊಂದಿಗೆ ಕಾರ್ಯನಿರ್ವಹಿಸಿದಾಗ ಯಾವುದೇ ಸಮಸ್ಯೆಗಳು ಉದ್ಭವವಾಗುವುದಿಲ್ಲ ಎಂಬುದು ಅರ್ಥವಾಗುತ್ತದೆ.

-ಡಾ. ಸಿದ್ದಲಿಂಗಪ್ಪ ಕೊಟ್ನೆಕಲ್, ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.