ADVERTISEMENT

ಲಸಿಕೆ: ಅಡ್ಡಪರಿಣಾಮಕ್ಕೆ ಪರಿಹಾರ ಏಕಿಲ್ಲ?

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 20:23 IST
Last Updated 10 ಫೆಬ್ರುವರಿ 2021, 20:23 IST

ಕೋವಿಡ್‌– 19 ಲಸಿಕೆ ಪಡೆದವರಿಗೆ ಲಸಿಕೆಯಿಂದ ಅಡ್ಡಪರಿಣಾಮ ಅಥವಾ ವೈದ್ಯಕೀಯ ಸಮಸ್ಯೆ ಕಾಣಿಸಿಕೊಂಡರೆ ಅದಕ್ಕೆ ವಿಮಾ ಪರಿಹಾರ ನೀಡಲಾಗದು ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಹೇಳಿರುವುದು ವರದಿಯಾಗಿದೆ (ಪ್ರ.ವಾ., ಫೆ. 9). ಲಸಿಕೆ ಕಂಡುಹಿಡಿದ ಮೇಲೆ ಅದರ ಸಾಧಕ ಬಾಧಕಗಳನ್ನು ಒರೆಗೆಹಚ್ಚಿ, ಅದರಿಂದ ಮನುಜರಿಗೆ ಯಾವುದೇ ಅಪಾಯ ಇಲ್ಲ ಎಂದು ಮನವರಿಕೆಯಾದ ಮೇಲೆ ಮಾತ್ರ ಅದನ್ನು ಪ್ರಯೋಗಿಸಲು ಅನುಮತಿ ನೀಡಬೇಕಾದದ್ದು ಸರ್ಕಾರದ ಜವಾಬ್ದಾರಿ.

ನಾವೇ ಮೊದಲು ಜನರಿಗೆ ಲಸಿಕೆ ನೀಡಿದ್ದೇವೆ ಎಂಬ ಹಿರಿಮೆ ಸಾರುವುದಕ್ಕೋ ಅಥವಾ ಕೋವಿಡ್‌ ಅನ್ನು ತಡೆಗಟ್ಟುವ ಆತುರದಲ್ಲೋ ಲಸಿಕೆಗೆ ಪರವಾನಗಿ ನೀಡಿ, ನಂತರ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಔಷಧಿಯಿಂದ ಆಗುವ ಅಡ್ಡಪರಿಣಾಮಗಳಿಗೆ ಸಂಬಂಧಿಸಿದವರು ಪರಿಹಾರ ಒದಗಿಸಬೇಕು. ಇಲ್ಲವಾದರೆ ಲಸಿಕೆ ಪಡೆಯಲು ಜನ ಮುಂದೆ ಬಾರದೆ ಕೋವಿಡ್ ಮತ್ತೆ ವಿಜೃಂಭಿಸಬಹುದು.

ಪತ್ತಂಗಿ ಎಸ್. ಮುರಳಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.