ADVERTISEMENT

ಯುವಕ–ಯುವತಿಯರ ಅನುಚಿತ ವರ್ತನೆಗೆ ಕಡಿವಾಣ ಹಾಕಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 20:01 IST
Last Updated 19 ಆಗಸ್ಟ್ 2019, 20:01 IST

ಬೆಳಗಾವಿಯ ರಸ್ತೆಗಳಲ್ಲಿ ಯುವತಿಯೊಬ್ಬಳು ನಗ್ನಳಾಗಿ ಸ್ಕೂಟರ್ ಓಡಿಸಿಕೊಂಡು ಹೋದ ಸುದ್ದಿ (ಪ್ರ.ವಾ., ಆ. 18) ತಿಳಿದ ಯಾರಾದರೂ ಬೇಸರಗೊಳ್ಳದೇ ಇರಲಾರರು. ಇತ್ತೀಚೆಗೆ ಕ್ಲಬ್, ಡಿಸ್ಕೊಥೆಕ್‌ಗಳಲ್ಲಿ ಬಹುಸಂಖ್ಯೆಯಲ್ಲಿ ಸೇರುವ ಯುವಕ–ಯುವತಿಯರಿಗೆ ಯಾರ ಭಯವೂ ಇರುವುದಿಲ್ಲ. ರಸ್ತೆ, ಪಾರ್ಕ್, ಸಿನಿಮಾ ಥಿಯೇಟರ್‌ಗಳಲ್ಲಿ ಸಾರ್ವಜನಿಕರ ಮುಂದೆಯೇ ನಾಚಿಕೆ ಇಲ್ಲದೆ ಅನುಚಿತವಾಗಿ ವರ್ತಿಸುತ್ತಾರೆ. ಇದು ಸುತ್ತಮುತ್ತಲಿನ ಜನರಿಗೆ ಮುಜುಗರವನ್ನುಂಟು ಮಾಡುತ್ತದೆ. ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದ ನಮ್ಮ ನಾಡಿನಲ್ಲಿ ಇಂತಹವರಿಂದ ಅದು ನಶಿಸಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರಮೇಲಿದೆ. ಇಂತಹ ವರ್ತನೆಗೆ ಕಡಿವಾಣ ಹಾಕುವ ಕೆಲಸವನ್ನು ಆಳುವ ವರ್ಗ ಮಾಡಬೇಕಿದೆ.

-ಯೋಗೇಶ್ ವೈ.ಸಿ., ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT