ADVERTISEMENT

ಇಲ್ಲೇ ಇದ್ದಾರೆ ಮಾನವರೂಪಿ ರಾಕ್ಷಸರು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 19:30 IST
Last Updated 5 ಏಪ್ರಿಲ್ 2021, 19:30 IST

ಭೂಕುಸಿತದಂತಹ ಮಹಾದುರಂತಗಳಿಗೆ ನಿಖರ ಕಾರಣ ಪತ್ತೆಹಚ್ಚುವಂತೆ ಹಾಗೂ ವಿಕೋಪಗಳನ್ನು ಪ್ರತಿಬಂಧಿಸುವ ಕ್ರಮಗಳನ್ನು ಸೂಚಿಸುವಂತೆ ಸರ್ಕಾರ ರಚಿಸಿದ್ದ ವಿಜ್ಞಾನಿಗಳು ಹಾಗೂ ಪರಿಸರತಜ್ಞರ ಸಮಿತಿಯು ಸಲ್ಲಿಸಿರುವ ವರದಿಯ ಹಿನ್ನೆಲೆಯಲ್ಲಿ ಬರೆದಿರುವ ಸಂಪಾದಕೀಯ (ಪ್ರ.ವಾ., ಏ. 5) ಅತ್ಯಂತ ಯೋಗ್ಯವಾಗಿದೆ. ಪ್ರಕೃತಿಯ ಕಿರುಕೋಪ ಸಹ ಎಂತಹ ನಾಶವನ್ನು ತಂದೊಡ್ಡುತ್ತದೆ ಎಂಬುದಕ್ಕೆ ಈಗಾಗಲೇ ಉತ್ತರ ಕರ್ನಾಟಕ, ಕೊಡಗು, ಕೇರಳ ಸಾಕ್ಷಿಯಾಗಿರುವುದನ್ನು ಅರಿಯಬೇಕು. ನಗರೀಕರಣ ಎಂಬ ವಿದೇಶಿ ಮಾದರಿಯನ್ನು ಭಾರತದಲ್ಲಿ ಕುರುಡಾಗಿ ಅನುಸರಿಸುತ್ತಿರುವುದರಿಂದ ಜನಪದ ಸಂಸ್ಕೃತಿ, ಕೂಡುಕುಟುಂಬ, ಸಮನ್ವಯಭಾವ, ಪ್ರಕೃತಿಯ ಆರಾಧನೆ, ಮಾನವೀಯ ಮೌಲ್ಯ ಇತ್ಯಾದಿಗಳನ್ನು ಗಾಳಿಗೆ ತೂರಿದ್ದಾಗಿದೆ.

ಭೂಮಿ, ಗಿಡ, ಮರ, ನದಿ, ಸಮುದ್ರ, ಪರ್ವತ ಇವೆಲ್ಲವೂ ಪ್ರತ್ಯಕ್ಷ ದೈವ ಎಂಬ ಪೂಜ್ಯ ನಂಬಿಕೆಯನ್ನು ನಮ್ಮ ಹಿರಿಯರು ನಮ್ಮಲ್ಲಿ ಬೆಳೆಸಿದ್ದರು. ಆದರೆ ಇಂದು ಅಂತಹ ದೈವವನ್ನೇ ಮಾನವನು ಭಕ್ಷಿಸುತ್ತಿದ್ದಾನೆ. ರಾಕ್ಷಸರ ಬಗ್ಗೆ ಪುರಾಣಗಳಲ್ಲಿ ಕಥೆ ಕೇಳಿದ್ದೇವೆ. ಇಂದು ಇಂತಹ ಮಾನವರೂಪಿ ರಾಕ್ಷಸರು ನಮ್ಮೆದುರಿಗೇ ಇದ್ದಾರೆ. ಆದರೂ ನಾವೇನೂ ಮಾಡಲಾರದಂತಹ ಸ್ಥಿತಿ ಇದೆ.

-ಟಿ.ಪಿ.ಸುಭಾಷಿಣಿ, ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.