ADVERTISEMENT

ತಾತ ಹಾಕಿದ ಮೊಕದ್ದಮೆಗೆ ಮೊಮ್ಮಕ್ಕಳ ಪರಿತಾಪ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 5 ಏಪ್ರಿಲ್ 2022, 19:30 IST
Last Updated 5 ಏಪ್ರಿಲ್ 2022, 19:30 IST

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಶಾಸಕ ಮುನಿರತ್ನ ಅವರ ಗೆಲುವನ್ನು ಅನೂರ್ಜಿತ ಎಂದು ಘೋಷಿಸಬೇಕು ಎಂಬ ತಕರಾರು ಅರ್ಜಿಯನ್ನು ಹೈಕೋರ್ಟ್ ಇದೀಗ ಕೈಗೆತ್ತಿಕೊಂಡಿದೆ ಎಂದು ವರದಿಯಾಗಿದೆ. ಆ ಚುನಾವಣೆ ನಂತರ ಮುನಿರತ್ನ ಅವರು ಅಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಂದು ಪಕ್ಷ ಸೇರಿ, ಉಪಚುನಾವಣೆ ಸಹ ನಡೆದು, ಅದರಲ್ಲೂ ಗೆದ್ದು ಈಗ ಶಾಸಕರಾಗಿದ್ದಾರೆ, ಸಚಿವರಾಗಿದ್ದಾರೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ತ್ವರಿತಗತಿಯಲ್ಲಿ ತೀರ್ಪು ಬಂದರೆ ಒಳ್ಳೆಯದು ಮತ್ತು ಅದು ಅಪೇಕ್ಷಿತ ಕೂಡಾ.

ತಡವಾಗಿ ಬರುವ ತೀರ್ಪುಗಳು ಅನೇಕ ಸಂದರ್ಭಗಳಲ್ಲಿ ಪರಿಣಾಮವನ್ನು ಗೌಣವಾಗಿಸುತ್ತವೆ. ನಾನಾ ಕಾರಣಗಳಿಂದ ವಿಚಾರಣೆಗಳು ಹತ್ತಾರು ವರ್ಷಗಳಷ್ಟು ಸುದೀರ್ಘ ಸಮಯ ತೆಗೆದುಕೊಳ್ಳುತ್ತವೆ. ಇನ್ನು ಸಿವಿಲ್ ಕೋರ್ಟುಗಳದ್ದಂತೂ ಕೇಳುವಂತೆಯೇ ಇಲ್ಲ. ತಾತ ಹಾಕಿದ ಮೊಕದ್ದಮೆಗೆ ಮಕ್ಕಳೂ ಮೊಮ್ಮಕ್ಕಳೂ ಪರಿತಪಿಸುವ ಸ್ಥಿತಿ ಬಂದೊದಗಿರುತ್ತದೆ. ನ್ಯಾಯದಾನ ಪ್ರಕ್ರಿಯೆಯು ತ್ವರಿತಗತಿಯಲ್ಲಿ ಆಗುವ ದಿಸೆಯಲ್ಲಿ ಉಪಕ್ರಮಗಳು ಜರುಗಲಿ.

- ಪತ್ತಂಗಿ ಎಸ್. ಮುರಳಿ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.