ADVERTISEMENT

ಕೆಸರಿನಲ್ಲಿ ನಡೆಯುವ ಆಟ

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 20:15 IST
Last Updated 14 ಜುಲೈ 2019, 20:15 IST

ಅಧಿಕಾರದ ಪಟ್ಟ ಉಳಿಸಿಕೊಳ್ಳುತ್ತಿರುವ ಪ್ರಯತ್ನದಲ್ಲಿ ಒಂದು ವರ್ಗ, ಪಟ್ಟಕ್ಕೇರಲು ಹವಣಿಸುತ್ತಿರುವ ಇನ್ನೊಂದು ವರ್ಗ, ಈ ಕಿತ್ತಾಟದಲ್ಲಿ ನಿಜಕ್ಕೂ ಬೇಸ್ತು ಬಿದ್ದದ್ದು ಮಾತ್ರ ಮತದಾರ ವರ್ಗ. ರಾಜ್ಯದಲ್ಲಿ ಆಡಳಿತ ಸರಿಯಾಗಿ ನಡೆಯುತ್ತಿಲ್ಲ.

ಇದರಿಂದ ತೊಂದರೆ ಅನುಭವಿಸಬೇಕಾಗಿರುವುದು ಸಾಮಾನ್ಯ ಜನರು. ಇದಕ್ಕೆಲ್ಲ ಯಾರು ಹೊಣೆ? ಅಧಿಕಾರದ ದುರಾಸೆಗೆ ರಾಜ್ಯದ ಅಭಿವೃದ್ಧಿಯನ್ನು ಬಲಿ ಕೊಡುತ್ತಿರುವುದು ಶೋಚನೀಯ.

ರೈತರ ಕಷ್ಟ, ಕಾರ್ಮಿಕರ ನೋವು, ಜನರ ಅಳಲನ್ನು ಕೇಳಲು ಅಧಿಕಾರಿಗಳಿಗೆ ಸಮಯವಿಲ್ಲ. ಅಧಿಕಾರದ ಹಂಬಲಕ್ಕಾಗಿ ಶಾಸಕರು ರೆಸಾರ್ಟ್‌ನಲ್ಲಿ ಕುಳಿತು ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ ನಿಜಕ್ಕೂ ಕೆಸರಿನಲ್ಲಿ ನಡೆಯುವ ಆಟ ಎನ್ನುವುದಕ್ಕೆ ನಮ್ಮ ರಾಜ್ಯವೇ ಉದಾಹರಣೆಯಾಗುತ್ತಿರುವುದು ನಮ್ಮೆಲ್ಲರ ದುರ್ದೈವ.

ADVERTISEMENT

- ರಾಜೇಶ್ ದಳವಾಯಿ ಜಿಡ್ಡಿ, ಸಿದ್ಧಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.