ADVERTISEMENT

ಅಚ್ಚರಿ ಮೂಡಿಸದ ಸಮೀಕ್ಷಾ ವರದಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:45 IST
Last Updated 25 ಏಪ್ರಿಲ್ 2019, 20:45 IST

ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಪಠ್ಯ ಕಲಿಕೆಯಲ್ಲಿನ ಕೊರತೆ ಬಗ್ಗೆ ಶಿಕ್ಷಣ ಇಲಾಖೆಯ ರಾಜ್ಯ ಸಾಧನಾ ಸಮೀಕ್ಷೆಯನ್ನು ಆಧರಿಸಿದ ವರದಿ ಓದಿ (ಪ್ರ.ವಾ., ಏ.25) ಅಷ್ಟೇನೂ ಅಚ್ಚರಿಯಾಗಲಿಲ್ಲ. ಪದವಿ ಕಾಲೇಜು ಮತ್ತು ವಿ.ವಿ ಉಪನ್ಯಾಸಕರಿಗೆ ತರಬೇತಿ ನೀಡುವ ಉದ್ದೇಶದಿಂದ ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯಗಳನ್ನು (ಅಕಾಡೆಮಿಕ್ ಸ್ಟಾಫ್‌ ಕಾಲೇಜ್) ತೆರೆಯಲಾಗಿದೆ.

ಆ ಮೂಲಕ ಅವರಿಗೆ ಪುನರ್ಮನನ ಶಿಬಿರ ಮತ್ತು ಕೋರ್ಸ್‌ಗಳನ್ನು ನಡೆಸಲಾಗುತ್ತದೆ. ಆದರೆ ತಮ್ಮ ವೃತ್ತಿಜೀವನಕ್ಕೆ ಪೂರಕವಾದ ಇಂತಹ ತರಬೇತಿಗಳು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಇರುವುದಿಲ್ಲ. ಇಂತಹ ಕೊರತೆಯಿಂದಾಗಿಯೇ ವಿದ್ಯಾರ್ಥಿಗಳಿಗೆ ಶಿಕ್ಷ
ಕರು ಸಮರ್ಥವಾಗಿ ಪಾಠ ಮಾಡುವುದರಲ್ಲಿ ವಿಫಲರಾಗುತ್ತಿದ್ದಾರೆ. ಇದರೊಂದಿಗೆ ಇವರಿಗೆ, ಪಾಠ ಮಾಡುವುದನ್ನು ಹೊರತುಪಡಿಸಿದ ಅನ್ಯ ಜವಾಬ್ದಾರಿ ಹೊರಿಸಲಾಗುತ್ತದೆ.

ಇಂತಹ ಸಂದರ್ಭದಲ್ಲಿ ಶಾಲೆಗಳಲ್ಲಿ ಭಾಷಾ ಕಲಿಕೆ ಗುಣಮಟ್ಟ ಹೆಚ್ಚಿಸಲು ಹೇಗೆ ಸಾಧ್ಯ? ಇದನ್ನು ಗಂಭೀರವಾಗಿ ಪರಿಗಣಿಸಿ, ಶಿಕ್ಷಕರಿಗೆ ಆಗಾಗ ತರಬೇತಿ ನೀಡುವ ಕ್ರಿಯಾ ಯೋಜನೆಗಳನ್ನು ಜಾರಿಗೆ ತಂದರೆ ಪರಿಸ್ಥಿತಿ ಸುಧಾರಿಸಬಹುದು.
-ಡಾ. ಕೆ.ಆರ್‌.ದುರ್ಗಾದಾಸ್,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.