ADVERTISEMENT

ಮಾದರಿ ಶಾಲೆ ಯೋಜನೆ ಸ್ವಾಗತಾರ್ಹ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 19:31 IST
Last Updated 29 ಡಿಸೆಂಬರ್ 2020, 19:31 IST

ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾದರಿ ಶಾಲೆಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿರುವುದು (ಪ್ರ.ವಾ., ಡಿ. 29) ಸ್ವಾಗತಾರ್ಹ ವಿಷಯ. ಬದಲಾದ ಸಾಮಾಜಿಕ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಮೂಲ ಸೌಕರ್ಯಗಳಿಂದ ವಂಚಿತ ವಾಗಿವೆ. ಸರ್ಕಾರಿ ಶಾಲೆ ಎಂದಾಕ್ಷಣ ಸಹಜವಾಗಿ ಕೆಂಪು ಹೆಂಚಿನ, ಹಳೆಯ ಕಟ್ಟಡವೊಂದರ ಚಿತ್ರ ಧುತ್ತೆಂದು ಕಣ್ಣ ಮುಂದೆ ಬರುವಷ್ಟು ಅಚ್ಚೊತ್ತಿಬಿಟ್ಟಿದೆ. ಇದರ ಮಧ್ಯೆ, ಗ್ರಾಮೀಣ ಭಾಗಗಳಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಬೃಹತ್ತಾಗಿ ಬೆಳೆದು ಆಕರ್ಷಕ ಕಟ್ಟಡ, ಶಾಲಾ ಬಸ್ ಮೊದಲಾದವುಗಳಿಂದ ಗ್ರಾಮಸ್ಥರನ್ನು ಸೆಳೆಯುತ್ತಿವೆ. ಹೀಗಿದ್ದೂ ಸರ್ಕಾರಿ ಶಾಲೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು, ಬಡ, ಮಧ್ಯಮ ವರ್ಗದ ಜನರಿಗೆ ಜೀವಸೆಲೆಯಂತಿವೆ. ಬದ್ಧತೆಯುಳ್ಳ ಶಿಕ್ಷಕರಿಂದ ಈಗಲೂ ಒಳ್ಳೆಯ ಶಿಕ್ಷಣ ದೊರಕುತ್ತಿದೆ. ಎಷ್ಟೋ ಪ್ರತಿಭಾವಂತರು ಇಂದಿಗೂ ಸರ್ಕಾರಿ ಶಾಲೆಗಳಿಂದಲೇ ಹೊರಹೊಮ್ಮುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದ ಸರ್ಕಾರಿ ಶಾಲೆಗಳ ಸಬಲೀಕರಣ ಆಗಬೇಕಾದ ತುರ್ತು ಇದೆ. ಸರ್ಕಾರ ಈ ನಿಟ್ಟಿನಲ್ಲಿ ನಡೆಸಿರುವ ಚಿಂತನೆ ಶೀಘ್ರವಾಗಿ ಅನುಷ್ಠಾನಕ್ಕೆ ಬರಲಿ.

-ಆರ್.ಎಸ್.ಅಯ್ಯರ್, ತುಮಕೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT