ADVERTISEMENT

ವಾಚಕರವಾಣಿ: ನೀರಿಗಾಗಿ ಹೋರಾಟ, ಮನೆಯಿಂದ ಆರಂಭವಾಗಲಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 19:30 IST
Last Updated 14 ಜನವರಿ 2022, 19:30 IST

ಮೇಕೆದಾಟು ಯೋಜನೆಯ ಕುರಿತು ನಾಗೇಶ ಹೆಗಡೆಯವರು ಲೇಖನದಲ್ಲಿ (ಪ್ರ.ವಾ., ಜ. 13) ಹೇಳಿರುವಂತೆ, ಈ ಯೋಜನೆಯ ಹೋರಾಟಕ್ಕೆ ಸಿಕ್ಕಿರುವ ಪ್ರಚಾರ ಹಾಗೂ ಬೆಂಬಲದ ಅರ್ಧದಷ್ಟಾದರೂ ಬೆಂಬಲ ಹಾಗೂ ಪ್ರಚಾರವು ಕೆರೆಗಳ ಹೂಳೆತ್ತುವ ಮತ್ತು ಮಳೆ ನೀರು ಸಂಗ್ರಹಿಸುವ ಕುರಿತಾದ ಯೋಜನೆಗಳಿಗೆ ಸಿಕ್ಕಿದರೆ ಭವಿಷ್ಯದಲ್ಲಿ ತಲೆದೋರುವ ನೀರಿನ ಕೊರತೆಯನ್ನು ನೀಗಿಸಬಹುದು. ನಮ್ಮಲ್ಲಿ ಮಳೆ ನೀರು ಸಂಗ್ರಹ ಹಾಗೂ ಕೆರೆ ಹೂಳೆತ್ತುವುದಕ್ಕೆ ಅನೇಕ ಯೋಜನೆಗಳಿದ್ದು, ನರೇಗಾ ಯೋಜನೆಯಡಿ ಹಾಗೂ ಕೆಲವು ಸ್ವಯಂಸೇವಾ ಸಂಘಟನೆಗಳ ವತಿಯಿಂದ ಅನೇಕ ಕೆರೆಗಳ ಹೂಳೆತ್ತಿ ಮರುಜೀವ ನೀಡಲಾಗಿದೆ. ಆದರೂ ಅದು ಒಂದು ಸಾಮೂಹಿಕ ಕಾರ್ಯವಾಗಿ ಜಾರಿಯಾಗಿಲ್ಲ. ಮೇಕೆದಾಟು ಯೋಜನೆ ಒಂದೇ ಅಲ್ಲ, ಎತ್ತಿನಹೊಳೆ, ಕಳಸಾ ಬಂಡೂರಿ, ಬೆಣ್ಣೆತೊರೆ, ಶರಾವತಿ ಹೀಗೆ ಇನ್ನೂ ಅನೇಕ ಬೃಹತ್ ನೀರಾವರಿ ಯೋಜನೆಗಳು ನೀರಿಗಿಂತ ಹೆಚ್ಚಾಗಿ ಹಣದ ಹೊಳೆಯನ್ನು ಹರಿಸುತ್ತವೆ! ಹಾಗಾಗಿ ಜಲ ಸಂರಕ್ಷಣೆ ಅಥವಾ ನೀರಿಗಾಗಿ ಹೋರಾಟ ಎನ್ನುವುದು ನಮ್ಮ ಮನ, ಮನೆಯಿಂದಲೇ ಆರಂಭವಾಗಬೇಕು. ಅದರ ಅರಿವು ಪ್ರತಿಯೊಬ್ಬರಿಗೂ ಆಗಬೇಕು ಹಾಗೂ ಅದು ನಮ್ಮ ಆದ್ಯ ಕರ್ತವ್ಯ.

ಸುವರ್ಣ ಸಿ.ಡಿ.,ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT