ADVERTISEMENT

ಹಸಿದೊಡಲು ತಣಿಸದ ಪಡಿತರ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 19:30 IST
Last Updated 5 ನವೆಂಬರ್ 2020, 19:30 IST

ರಾಜ್ಯದ ಗೋದಾಮುಗಳಲ್ಲಿ ಟನ್‌ಗಟ್ಟಲೆ ಆಹಾರಧಾನ್ಯ ಕೊಳೆಯುತ್ತಿದೆ ಎಂಬ ಸುದ್ದಿ ಓದಿ (ಪ್ರ.ವಾ., ನ. 5) ಕಣ್ಣೀರು ಬಂತು. ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಸಲುವಾಗಿ ಸಂಗ್ರಹಿಸಿ ಇಟ್ಟಿದ್ದ ಆಹಾರಧಾನ್ಯ ಕೊಳೆಯುತ್ತಿರುವುದು, ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದ ತತ್ತರಿಸಿ ತುತ್ತು ಅನ್ನಕ್ಕೂ ಪರದಾಡುತ್ತಿರುವ ಸಂತ್ರಸ್ತರ ಹಸಿವು ನೀಗಿಸಲೂ ಅದು ಬಳಕೆಯಾಗದೇ ಹೋದದ್ದು ದುರದೃಷ್ಟಕರ. ಈಗ ಶಾಲೆಗಳು ಪ್ರಾರಂಭವಾದರೆ ಮತ್ತೆ ಹೊಸದಾಗಿ ಆಹಾರಧಾನ್ಯಗಳ ಸರಬರಾಜು ಪ್ರಾರಂಭವಾಗುತ್ತದೆ. ಹಳೆಯದನ್ನೆಲ್ಲ ತಿಪ್ಪೆಗೆ ಸುರಿದು ನಾವು ಸಾಧಿಸುವುದಾದರೂ ಏನನ್ನು?

- ಕುಮಾರ ಚಲವಾದಿ,ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT