ADVERTISEMENT

ಮುಕ್ತ ವಿ.ವಿ: ತೊಂದರೆ ನೀಗಲಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 19:30 IST
Last Updated 22 ಅಕ್ಟೋಬರ್ 2021, 19:30 IST

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬಿ.ಎ. ಮಾಡಿರುವ ವಿದ್ಯಾರ್ಥಿಗಳಿಗೆ 2013- 14ನೇ ಸಾಲಿನಿಂದ ಕಾನ್ವೊಕೇಶನ್ ಸರ್ಟಿಫಿಕೇಟ್ ಕೊಡಲಾಗುತ್ತಿಲ್ಲ. ‘ಕೋರ್ಟಿನಲ್ಲಿ ಕೇಸ್ ಇರುವುದರಿಂದ ಅದು ಬಗೆಹರಿಯುವವರೆಗೆ ಸರ್ಟಿಫಿಕೇಟ್‌ ಕೊಡಲು ಸಾಧ್ಯವಿಲ್ಲ’ ಎಂದು ವಿಶ್ವವಿದ್ಯಾಲಯ ಹೇಳಿದೆ.

ರಾಜ್ಯದಲ್ಲಿ ಪರೀಕ್ಷೆ ಬರೆದ ಅನೇಕ ವಿದ್ಯಾರ್ಥಿಗಳು ಇದರಿಂದ ತೊಂದರೆಗೆ ಒಳಗಾಗಿದ್ದಾರೆ. ಪದವಿ ಪ್ರಮಾಣಪತ್ರ ಎಲ್ಲ ಕಡೆ ಕಡ್ಡಾಯವಾಗಿ ಬೇಕಾಗಿರುವುದರಿಂದ ಅದಿಲ್ಲದೆ ಬೇರೆ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಅವಕಾಶ ದೊರೆಯುತ್ತಿಲ್ಲ. ನೌಕರಿ ಹಾಗೂ ಸಂಶೋಧನೆ ಮಾಡುವವರಿಗೂ ಸಮಸ್ಯೆಯಾಗಿದೆ. ಸಂಬಂಧಪಟ್ಟವರು ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಯುವಂತೆ ನೋಡಿಕೊಂಡು ವಿದ್ಯಾರ್ಥಿಗಳ ಸಂಕಷ್ಟವನ್ನು ಪರಿಹರಿಸಬೇಕು.

ಅನಿತಾ ಪಿ. ತಾಕೊಡೆ,ಮುಂಬೈ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.