ADVERTISEMENT

ಗಡಿ ಜನರಲ್ಲಿ ಸ್ಥೈರ್ಯ ತುಂಬಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 20:15 IST
Last Updated 7 ಆಗಸ್ಟ್ 2019, 20:15 IST

ರಾಜ್ಯದಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿದ್ದು, ಕೆಲವರು ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ನಮ್ಮ ಭಾಗದ ಜೀವನದಿ ಕೃಷ್ಣಾ ಸದ್ಯದ ಮಟ್ಟಿಗೆ ಎರಡು ಅಲಗಿನ ಕತ್ತಿಯಂತಾಗಿದೆ. ಎರಡು ತಿಂಗಳ ಹಿಂದಷ್ಟೇ ಹನಿ ನೀರಿಲ್ಲದೆ ಕಬ್ಬು ಸೇರಿದಂತೆ ಅನೇಕ ಬೆಳೆಗಳನ್ನು ಕಳೆದುಕೊಂಡು ಪರಿತಪಿಸಿ, ನೆರೆಯ ಮಹಾರಾಷ್ಟ್ರದಿಂದ ಕನಿಷ್ಠ ಕುಡಿಯುವ ಉದ್ದೇಶಕ್ಕಾದರೂ ನೀರು ಬಿಡಿಸುವಂತೆ ಜನರು ಬೇಡಿಕೊಂಡರು. ಆದರೆ ಅದನ್ನು ಕೇಳಿಸಿಕೊಳ್ಳಬೇಕಾಗಿದ್ದ ಶಾಸಕರು ಬೆಚ್ಚಗೆ ಮುಂಬೈ ಸೇರಿಕೊಂಡರೆ, ಅಧಿಕಾರಿಗಳು ಜಾಣಕಿವುಡರಾಗಿದ್ದರು. ಆದರೆ ಈಗ ನೆರೆ ರಾಜ್ಯದಲ್ಲಿ ಸುರಿಯುತ್ತಿರುವ ಮಹಾ ಮಳೆಯಿಂದ ಅದೇ ಕೃಷ್ಣಾ ನದಿಯು ರೌದ್ರಾವತಾರ ತಾಳಿದ್ದು, ನೆರೆ ಭೀತಿಯಿಂದ ಜನರು ತಮ್ಮ ಮನೆಮಠ ತೊರೆದು ದನಕರುಗಳೊಂದಿಗೆ ಸುರಕ್ಷಿತ ಸ್ಥಳ ಅರಸಿ ಹೋಗುತ್ತಿದ್ದಾರೆ.

ದುದೈ೯ವದ ಸಂಗತಿ ಎಂದರೆ, ಆಗ ಮುಂಬೈ ಪಾಲಾಗಿದ್ದ ಶಾಸಕರು ಇಂದು ಅನಹ೯ಗೊಂಡು ಮನೆ ಸೇರಿದ್ದರೆ, ಅಧಿಕಾರಿಗಳು ಮಾತ್ರ ತಮ್ಮ ಹಳೆ ಚಾಳಿಯನ್ನು ಮುಂದುವರಿಸಿದ್ದಾರೆ. ಇದರಿಂದಾಗಿ ಅಥಣಿ ಮತಕ್ಷೇತ್ರದ ಜನರು ಅನಾಥ
ಪ್ರಜ್ಞೆಯನ್ನು ಅನುಭವಿಸುವಂತಾಗಿದೆ. ಜಿಲ್ಲಾ ಆಡಳಿತವು ಗಡಿ ತಾಲ್ಲೂಕಿನ ಜನರಲ್ಲಿ ಸ್ಥೈರ್ಯ ತುಂಬಬೇಕಾಗಿದೆ.

- ಸುರೇಶ ಎಂ. ತಾಕತರಾವ,ಹಲ್ಯಾಳ, ಅಥಣಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.