ADVERTISEMENT

ಅಂಗನವಾಡಿಗೆ ಮಗಳನ್ನು ಸೇರಿಸಿದ ಕೊಡಗು ಎಸ್‌ಪಿ: ಅಭಿನಂದನೀಯ ನಡವಳಿಕೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2019, 5:04 IST
Last Updated 18 ಅಕ್ಟೋಬರ್ 2019, 5:04 IST
ಅಂಗನವಾಡಿಯಲ್ಲಿ ತಮ್ಮ ಪುತ್ರಿ ಖುಷಿಯೊಂದಿಗೆ ಚಿಣ್ಣರ ಕುಶಲೋಪರಿ ವಿಚಾರಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌
ಅಂಗನವಾಡಿಯಲ್ಲಿ ತಮ್ಮ ಪುತ್ರಿ ಖುಷಿಯೊಂದಿಗೆ ಚಿಣ್ಣರ ಕುಶಲೋಪರಿ ವಿಚಾರಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ. ಪನ್ನೇಕರ್‌   

ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ತಮ್ಮ ಎರಡೂವರೆ ವರ್ಷದ ಪುತ್ರಿ ಖುಷಿಯನ್ನು ಅಂಗನವಾಡಿಗೆ ಸೇರಿಸಿ ಅಲ್ಲಿನ ಇತರ ಮಕ್ಕಳ ಜೊತೆ ಬೆರೆತು ಕಲಿಯುವಂತೆ ಮಾಡಿದ್ದಾರೆ(ಪ್ರ.ವಾ., ಅ. 16). ಈ ಮೂಲಕ, ಸರ್ಕಾರಿ ಶಾಲೆಗಳ ಪರ ಬರೀ ಭಾಷಣ ಮಾಡದೆ ಸ್ವತಃ ಅನುಸರಿಸಿದ್ದಾರೆ.

ಇವರ ನಡವಳಿಕೆ ಮಾದರಿಯದಾಗಿದ್ದು ಎಲ್ಲ ಸರ್ಕಾರಿ ಅಧಿಕಾರಿಗಳೂ ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿದರೆ, ಅವುಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗುವುದರಲ್ಲಿ ಸಂಶಯವಿಲ್ಲ.

ADVERTISEMENT

-ಡಿ.ಪ್ರಸನ್ನ ಕುಮಾರ್,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.