ADVERTISEMENT

ವಾಚಕರ ವಾಣಿ: ಪಕ್ಷಿಪ್ರಿಯರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 19:30 IST
Last Updated 10 ನವೆಂಬರ್ 2020, 19:30 IST

ಮೊಬೈಲ್ ಟವರ್‌ಗಳಿಂದ ಹೊರಡುವ ವಿಕಿರಣಗಳ ಪರಿಣಾಮದಿಂದ ಪ್ರಕೃತಿಯಲ್ಲಿ ಗುಬ್ಬಚ್ಚಿಗಳು ಸಾಯುತ್ತಿವೆ ಹಾಗೂ ಅವುಗಳ ಸಂತತಿ ನಶಿಸುತ್ತಿದೆ ಎನ್ನುವ ಆತಂಕ ಕೆಲವು ವರ್ಷಗಳ ಕೆಳಗೆ ಇತ್ತು. ಆದರೆ, ಈಗ ಗುಬ್ಬಿಗಳ ಚಿಂವ್‌ ಚಿಂವ್‌ ಕಲರವ ಕಿವಿಗೆ ಬೀಳುತ್ತದೆ. ಪಕ್ಷಿಪ್ರೇಮಿ ಯುವ ಸಂಘಟನೆಯ ಕೆಲವರು ಬೇಸಿಗೆಯಲ್ಲಿ ಮನೆ ಮನೆಗೆ ಭೇಟಿ ನೀಡಿ, ಗುಬ್ಬಿಯ ಗೂಡು, ದಾಹ ನೀಗಿಸಲು ಪುಟ್ಟ ಬಟ್ಟಲಿನಂತಹ ಪರಿಕರಗಳನ್ನು ಉಚಿತವಾಗಿ ವಿತರಿಸುತ್ತಾ ಬಂದಿದ್ದಾರೆ. ಗುಬ್ಬಿಗಳು ಪುನಃ ಪ್ರಕೃತಿಯಲ್ಲಿ ಕಾಣಿಸಿಕೊಳ್ಳಲು ಪೂರಕ ವಾತಾವರಣ ನಿರ್ಮಿಸುತ್ತಿರುವ ಅವರ ಕಳಕಳಿ ಉತ್ತಮ ಬೆಳವಣಿಗೆ.

–ಟಿ.ಎಸ್.ಪ್ರತಿಭಾ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT