ADVERTISEMENT

ಅಂಗವಿಕಲರ ಹಕ್ಕು: ಪಠ್ಯ ಸೇರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 6 ಏಪ್ರಿಲ್ 2022, 19:30 IST
Last Updated 6 ಏಪ್ರಿಲ್ 2022, 19:30 IST

ಅಂಗವಿಕಲರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಎಗ್ಗಿಲ್ಲದೇ ನಡೆಯುವುದಕ್ಕೆ ಮೂಲ ಕಾರಣ, ಜನಸಾಮಾನ್ಯರು ಮತ್ತು ಅಧಿಕಾರಿ ವರ್ಗಕ್ಕೆ ಅಂಗವಿಕಲರ ಹಕ್ಕುಗಳು ಹಾಗೂ ಅವುಗಳ ರಕ್ಷಣೆಯ ಬಗ್ಗೆ ಅರಿವಿಲ್ಲದಿರುವುದೇ ಆಗಿದೆ. ಅಂಗವಿಕಲರ ಹಕ್ಕುಗಳ ಕಾಯ್ದೆ– 2016ರ ಪ್ರಕಾರ, ಅಂಗವಿಕಲರ ಹಕ್ಕುಗಳು ಮತ್ತು ಅವುಗಳ ರಕ್ಷಣೆ ಕುರಿತು ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪಠ್ಯವಾಗಿ ಒಂದು ಅಧ್ಯಾಯವನ್ನು ಅಳವಡಿಸಬೇಕು. ಈ ಕಾಯ್ದೆ ಜಾರಿಗೆ ಬಂದು 5 ವರ್ಷಗಳು ಸರಿದಿದ್ದರೂ ಅಂಗವಿಕಲರ ಸಬಲೀಕರಣ ಆಗದಿರುವುದು ವಿಪರ್ಯಾಸವೇ ಸರಿ.

ಸಂಬಂಧಪಟ್ಟ ಸಚಿವರು ಹಾಗೂ ಶಾಲಾ ಕಾಲೇಜು ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರು ಈ ಕುರಿತು ಪರಾಮರ್ಶೆ ಮಾಡಿಕೊಂಡು, 2022- 23ರ ಶೈಕ್ಷಣಿಕ ವರ್ಷದಿಂದಲೇ ಈ ವಿಷಯವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಈ ಮೂಲಕ ಅಂಗವಿಕಲ ಸಮುದಾಯವು ಮುಖ್ಯವಾಹಿನಿಗೆ ಬರಲು ಸಹಕರಿಸಬೇಕು.

– ಚಂದ್ರಶೇಖರ ಪುಟ್ಟಪ್ಪ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.