ADVERTISEMENT

ಹಿಂದಿಯೇತರ ಚಿತ್ರಗಳನ್ನೂ ಪ್ರದರ್ಶಿಸಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 18:03 IST
Last Updated 12 ಫೆಬ್ರುವರಿ 2019, 18:03 IST

ಹಿಂದಿಯೇತರ ಚಿತ್ರಗಳನ್ನೂ ಪ್ರದರ್ಶಿಸಿ

ರಾಜ್ಯಸಭೆಯ ಹಿಂದಿಯೇತರ ಸದಸ್ಯರು ಹಿಂದಿ ಕಲಿಯಲಿ ಎಂಬ ಉದ್ದೇಶದಿಂದ ಜನಪ್ರಿಯ ಹಿಂದಿ ಚಲನಚಿತ್ರಗಳನ್ನು ಪ್ರದರ್ಶನ ಮಾಡಲಾಗುವುದಂತೆ. ಹಾಗಿದ್ದರೆ ಹಿಂದಿ ಭಾಷಿಕ ಸದಸ್ಯರಿಗೆ ಕನ್ನಡ, ತಮಿಳು, ತೆಲುಗು ಮೊದಲಾದ ಹಿಂದಿಯೇತರ ಚಿತ್ರಗಳನ್ನು ತೋರಿಸಲಿ. ಅವರೂ ನಮ್ಮ ಭಾಷೆ ಕಲಿಯುವುದು ಬೇಡವೇ?

ಗಿರೀಶ್ ಕಾರ್ಗದ್ದೆ,ಬಾಳೆಹೊನ್ನೂರು

ADVERTISEMENT

***

ಸಮತೋಲನವಿದೆ ಆದರೆ...

ರಾಜ್ಯದ ಈ ಸಲದ ಮುಂಗಡಪತ್ರದಲ್ಲಿ ಸಮತೋಲನ ಕಾಯ್ದುಕೊಂಡಿರುವುದು ವಿಶೇಷ. ಏಕೆಂದರೆ, ಈ ಬಾರಿ ಕಳೆದ ವರ್ಷದ ಬಜೆಟ್‌ನಂತೆ ಉತ್ತರ ಕರ್ನಾಟಕವನ್ನು ಮರೆತಿಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಕನಸುಗಳನ್ನು ಮೆಚ್ಚಬೇಕಾದದ್ದೇ. ಅಹಿತಕರ ರಾಜಕೀಯ ವಿದ್ಯಮಾನಗಳ ನಡುವೆ ಇಂತಹ ಪ್ರಯತ್ನ ಸಾಹಸವೇ ಸರಿ.

ಈ ಬಜೆಟ್‌ನಲ್ಲಿ ಸುಮಾರು 40 ಗುರುಪೀಠಗಳಿಗೆ ಅನುದಾನ ನೀಡಿದಂತೆ, ರಾಜ್ಯದಲ್ಲಿರುವ ವಸ್ತುಸಂಗ್ರಹಾಲಯ ಹಾಗೂ ನಗರ ಗ್ರಂಥಾಲಯಗಳ ಅಭಿವೃದ್ಧಿಗೆ ಹಾಗೂ ಕರ್ನಾಟಕ ಸಂಘಗಳಿಗೆ, ಕನ್ನಡ ಸಂಘಗಳಿಗೆ ಅನುದಾನ ನೀಡಿದ್ದರೆ ಈ ಮುಂಗಡ ಪತ್ರಕ್ಕೆ ಮತ್ತಷ್ಟು ಮೆರುಗು ಬರುತ್ತಿತ್ತು.

ಬಿ.ಎಸ್.ತಿಮ್ಮೋಲಿ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.