ADVERTISEMENT

ಹಿಂದಿ ಹೇರಿಕೆ: ಬದಲಾಗದ ವರಸೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 16 ಸೆಪ್ಟೆಂಬರ್ 2022, 19:31 IST
Last Updated 16 ಸೆಪ್ಟೆಂಬರ್ 2022, 19:31 IST

ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಪ್ರವೃತ್ತಿಯ ವಿರುದ್ಧ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರು ಪ್ರತಿಭಟಿಸಿದ್ದಾರೆ. ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡುವುದಕ್ಕೆ ಕಾನೂನು ರೂಪಿಸಲು ಇದೇ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ತುಂಬಾ ಜಾಗರೂಕತೆಯಿಂದ ತಮ್ಮ ಧಣಿಗಳ ಮನನೋಯದಂತೆ ಮಾಮೂಲಿನ ಉತ್ತರ ನೀಡಿದ್ದಾರೆ.

ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಹಿಂದಿನಿಂದಲೂ ಅವ್ಯಾಹತವಾಗಿ ನಡೆಯುತ್ತಿದ್ದರೂ ಅದು 2014ರ ನಂತರ ತೀವ್ರವಾಗಿದೆ. ಲೋಕಸಭೆ, ರಾಜ್ಯಸಭೆ ಕಲಾಪಗಳಲ್ಲಿ ಮೊದಲೆಲ್ಲಾ ಬಹುತೇಕ ಸಚಿವರು, ಸದಸ್ಯರ ಪ್ರಶ್ನೆಗಳಿಗೆ ಇಂಗ್ಲಿಷ್‌ನಲ್ಲಿಯೇ ಉತ್ತರಿಸುತ್ತಿದ್ದರು. ಆದರೆ ಈಗ ಎಲ್ಲರೂ ಹಿಂದಿಯಲ್ಲಿಯೇ ಉತ್ತರಿಸುತ್ತಾರೆ. ದಕ್ಷಿಣದ ಸದಸ್ಯರು ಪ್ರಶ್ನೆಗಳನ್ನು ಕೇಳಲು ತಮ್ಮ ಪ್ರಾದೇಶಿಕ ಭಾಷೆ ಅಥವಾ ಇಂಗ್ಲಿಷ್ ಅನ್ನು ಬಳಸುತ್ತಾರೆ. ಆದರೆ ಇದಕ್ಕೆ ಅಪವಾದ ಎಂಬಂತೆ ಕರ್ನಾಟಕದ ಸದಸ್ಯರು ಹಿಂದಿಯಲ್ಲಿ ಉತ್ತರಿಸುತ್ತಾರೆ! ಇದು ತಪ್ಪಬೇಕು.

ಸರ್ಕಾರಿ ನಿಯಂತ್ರಣದ ಆಕಾಶವಾಣಿ, ದೂರದರ್ಶನಗಳನ್ನು ಪ್ರಸಾರ ಭಾರತಿ ಎಂದು ಬದಲಾಯಿಸಿದರೂ ಅವುಗಳ ವರಸೆ ಮಾತ್ರ ಬದಲಾಗಲಿಲ್ಲ. ಈಗಲೂ ಇವು 1975ರ ತುರ್ತುಪರಿಸ್ಥಿತಿ ಕಾಲದಲ್ಲಿದ್ದಂತೆ ಕೇಂದ್ರ ಸರ್ಕಾರದ ತುತ್ತೂರಿಗಳಾಗಿವೆ. ಆಕಾಶವಾಣಿ ವಾರ್ತೆಗಳಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಅವರ ಭಾಷಣಗಳೇ ಸುದ್ದಿಗಳಾಗಿವೆ. ಹಿಂದಿ ಕೇಳಿ ಕೇಳಿ ತಲೆ ಸುತ್ತು ಬರುವಂತಾಗುತ್ತದೆ. ಇದೇ 14ರ ಬೆಳಿಗ್ಗೆ, 7.15ಕ್ಕೆ ಪ್ರಸಾರವಾಗುವ ಪ್ರದೇಶ ಸಮಾಚಾರದ ಬದಲು ‘ಹಿಂದಿ ದಿವಸ್’ ಕುರಿತ ಅಮಿತ್ ಶಾ ಅವರ ಭಾಷಣವನ್ನು ಪ್ರಸಾರ ಮಾಡಿದ್ದು ಎಷ್ಟು ಸರಿ?

ADVERTISEMENT

⇒ಮುಳ್ಳೂರು ಪ್ರಕಾಶ್,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.