ADVERTISEMENT

ರಜೆ: ಚರ್ಚೆಗೆ ಸಕಾಲವಲ್ಲ

​ಪ್ರಜಾವಾಣಿ ವಾರ್ತೆ
Published 29 ಮೇ 2019, 19:07 IST
Last Updated 29 ಮೇ 2019, 19:07 IST

ರಾಜ್ಯ ಸರ್ಕಾರಿ ನೌಕರರಿಗೆ 4ನೇ ಶನಿವಾರವೂ ರಜೆ ನೀಡಲು, ಪ್ರಸ್ತುತ ಇರುವ ಸಾಂದರ್ಭಿಕ ರಜೆಗಳನ್ನು 15ರಿಂದ 12 ದಿನಗಳಿಗೆ ಇಳಿಸಲು,ಮಹಾವೀರ, ಬಸವ, ಮಹರ್ಷಿ ವಾಲ್ಮೀಕಿ, ಕನಕಜಯಂತಿಗಳು, ಕಾರ್ಮಿಕರ ದಿನಾಚರಣೆ, ಗುಡ್‌ಫ್ರೈಡೆ, ಮಹಾಲಯ ಅಮಾವಾಸ್ಯೆ, ಈದ್–ಮಿಲಾದ್ಹಬ್ಬಕ್ಕೆ ನೀಡುತ್ತಿರುವ ಸಾರ್ವತ್ರಿಕ ರಜೆಗಳನ್ನು ರದ್ದುಪಡಿಸಲು ರಾಜ್ಯ ಸಚಿವ ಸಂಪುಟ ಉಪಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ (ಪ್ರ.ವಾ., ಮೇ 29).ಈ ವಿಷಯ ಆಡಳಿತಾತ್ಮಕವೇ? ಭಾವನಾತ್ಮಕವೇ? ಸರಿಯೇ– ತಪ್ಪೇ? ಈ ಶಿಫಾರಸನ್ನು ಒಪ್ಪಬಹುದೇ ಎಂಬ ಚರ್ಚೆ ಈಗಿನ ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಯಲ್ಲಿ ತರವಲ್ಲ.

ಯಾವ ವಿಚಾರವನ್ನು ಬೇಕಾದರೂ ತಮ್ಮ ಪರವಾಗಿ ಹೆಣೆದುಕೊಂಡು, ಹೊಸದೊಂದು ಸಾರ್ವಜನಿಕ ಸಂವಾದ ಶುರು ಮಾಡಬಲ್ಲ ರಾಜಕೀಯ ಸಿದ್ಧಾಂತವಾದಿಗಳ ಸಂಖ್ಯೆ ಕಳೆದ ಐದಾರು ವರ್ಷಗಳಲ್ಲಿ ಹೆಚ್ಚಾಗಿದೆ. ಇಂಥವರು ಸಮಾಜದಲ್ಲಿ ಇನ್ನಷ್ಟು ಒಡಕುಗಳನ್ನು ತರಲು ಈ ವಿಷಯವನ್ನೇ ಬಳಸಿಕೊಳ್ಳುವ ಅಪಾಯವೂ ಇದೆ. ಹಾಗಾಗಿ ಈ ವಿಚಾರಕ್ಕೆ ಸಚಿವ ಸಂಪುಟ ಸಭೆ ಸಹಮತ ಕೊಡದಿರುವುದೇ ಲೇಸು. ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿ ತಿಳಿಯಾಗಿದ್ದಾಗ ಇಂಥ ಚರ್ಚೆಗಳು ಮುನ್ನೆಲೆಗೆ ಬಂದರೆ ಉತ್ತಮ.

ನಾಗೇಶ್ ಕೆ.ಎನ್.,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.