ADVERTISEMENT

ಏಕರೀತಿಯ ಪಠ್ಯ ಹೇಗೆ ಸಾಧ್ಯ?

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 19:45 IST
Last Updated 1 ಜೂನ್ 2020, 19:45 IST

ಬಹುತ್ವದ ದೇಶ ನಮ್ಮದು. ಭಿನ್ನ ಸಂಸ್ಕೃತಿ, ಹಲವು ಭಾಷೆಗಳು ಇಲ್ಲಿವೆ. ಒಂದು ಭಾಷೆ, ಒಂದೇ ಬಗೆಯ ಆಹಾರ, ಒಂದೇ ರೀತಿಯ ಬಟ್ಟೆ ಅನ್ನುವ ಸಿದ್ಧಾಂತವನ್ನು ಜನರ ಮೇಲೆ ಹೇರುವ ಹುನ್ನಾರವು ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ. ಈಗ ವಿಶ್ವವಿದ್ಯಾಲಯಗಳತ್ತ ಇವರ ಚಿತ್ತ ಹರಿದಿದೆ. ಬಹು ಸಂಸ್ಕೃತಿಯ ದೇಶದಲ್ಲಿ ಏಕರೀತಿಯ ಪಠ್ಯ ಹೇಗೆ ಸಾಧ್ಯ? ಈ ರೀತಿ ಮಾಡಹೊರಟರೆ ಉನ್ನತ ಶಿಕ್ಷಣದಲ್ಲಿ ಪ್ರಾದೇಶಿಕತೆಗೆ ಮಾರಕವಾಗುತ್ತದೆ. ತಾರ್ಕಿಕವಲ್ಲದ ಈ ತೀರ್ಮಾನವನ್ನು ಹಾಗೂ ಹುಚ್ಚು ಸಾಹಸವನ್ನು ಕೈಬಿಡಬೇಕು.

-ಆರ್.ಜಿ.ಹಳ್ಳಿ ನಾಗರಾಜ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT