ADVERTISEMENT

ಮುಳ್ಳುಗಳನ್ನು ಎಷ್ಟೆಂದು ತೆಗೆಯುತ್ತೀರಿ?

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2021, 17:09 IST
Last Updated 1 ಫೆಬ್ರುವರಿ 2021, 17:09 IST

ಕ್ಯಾಲಿಫೋರ್ನಿಯಾದ ಉದ್ಯಾನದಲ್ಲಿ ಸ್ಥಾಪಿತವಾಗಿದ್ದ ಗಾಂಧೀಜಿ ಪುತ್ಥಳಿಯನ್ನು ಇದೇ ವರ್ಷದ ಅವರ ಪುಣ್ಯತಿಥಿಯ ಪೂರ್ವದಲ್ಲಿ ದುಷ್ಟರು ಭಗ್ನಗೊಳಿಸಿದ್ದು ಜಗತ್ತಿನಾದ್ಯಂತ ಭಾರತೀಯ ಮನಸ್ಸುಗಳನ್ನು ಗಾಸಿಗೊಳಿಸಿದೆ. ಇಂಥ ಅವಿಸ್ಮರಣೀಯ ವ್ಯಕ್ತಿಗಳ ಸ್ಮಾರಕಗಳನ್ನು ಧ್ವಂಸಗೊಳಿಸುವ, ವಿರೂಪಗೊಳಿಸುವ, ಭಂಜಿಸುವ ಕೆಲಸಗಳು ಹೊಸವೇನೂ ಅಲ್ಲ.

ಈ ಸಂದರ್ಭದಲ್ಲಿ ಹಿರಿಯರ ಹಿತನುಡಿ ನೆನಪಾಗುತ್ತಿದೆ. ಜಗತ್ತನ್ನು ತುಂಬಿಕೊಂಡ ಮುಳ್ಳುಗಳನ್ನು ಎಷ್ಟೆಂದು ತೆಗೆಯುತ್ತೀರಿ? ಪಾದರಕ್ಷೆಗಳನ್ನು ತೊಟ್ಟುಕೊಳ್ಳಿರಿ. ಹೌದು, ಹಾಗೆಯೇ ಇಂಥ ದುಷ್ಟರನ್ನು ಎಷ್ಟೆಂದು ನಿಗ್ರಹಿಸುತ್ತೀರಿ? ಅವರು ಕ್ಯಾನ್ಸರ್ ರೋಗಾಣುಗಳಂತೆ ಸಿಕ್ಕ ಸಿಕ್ಕಲ್ಲಿ ಕಾಲು ಚಾಚುತ್ತಿದ್ದಾರೆ. ನಾವೇ ಇದಕ್ಕೆ ಉತ್ತರ ರೂಪದಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಸಮಯೋಚಿತವಲ್ಲವೇ? ಇನ್ನು ಮುಂದಿನ ದಿನಗಳಲ್ಲಿ ಅವಿಸ್ಮರಣೀಯರ ಮೂರ್ತಿ- ಸ್ಮಾರಕಗಳ ಬದಲಾಗಿ ಸಾರ್ವಜನಿಕ ವಾಚನಾಲಯಗಳು ಸ್ಥಾಪನೆಗೊಳ್ಳಲಿ, ವಿದ್ಯಾಸಂಸ್ಥೆಗಳು ಉದಯವಾಗಲಿ, ಉದ್ಯಾನಗಳು ರೂಪುಗೊಳ್ಳಲಿ, ಆಟದ ಮೈದಾನಗಳು ಮೈತಳೆಯಲಿ.

-ಮಾಲತಿ ಪಟ್ಟಣಶೆಟ್ಟಿ,ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.