ADVERTISEMENT

ಐಪಿಎಲ್‌ ಮನರಂಜನೆಗೆ ಮೀಸಲಾಗಲಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 19:30 IST
Last Updated 4 ನವೆಂಬರ್ 2020, 19:30 IST

ಕೆಲ ಯುವಕ– ಯುವತಿಯರು ಇತ್ತೀಚೆಗೆ ಐಪಿಎಲ್‍ನಲ್ಲಿ ತಮ್ಮ ರಾಜ್ಯ ಮತ್ತು ಭಾಷೆಯ ನೆಚ್ಚಿನ ಆಟಗಾರರ ಆಧಾರದ ಮೇಲೆ ತಮ್ಮ ತಮ್ಮ ತಂಡಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಅದೇ ರೀತಿ, ತಮಗಾಗದ ಭಾಷೆಯ ಆಟಗಾರರ ತಂಡ ಕಳಪೆ ಪ್ರದರ್ಶನ ನೀಡಿದಾಗ ಹೀಯಾಳಿಸುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಭಾರತದ ಈ ಎಲ್ಲ ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಾರೆ ಮತ್ತು ವೈಯಕ್ತಿಕ ಕೊಡುಗೆಗಳ ಮೂಲಕ ಭಾರತದ ಗರಿಮೆಯನ್ನು ಹೆಚ್ಚಿಸಿದ್ದಾರೆ ಎಂಬುದನ್ನು ಮರೆತುಬಿಟ್ಟಿದ್ದಾರೆ. ಐಪಿಎಲ್ ಕೇವಲ ಮನರಂಜನೆಗಾಗಿ ಮೀಸಲಿದ್ದು ಅದನ್ನು ಮನರಂಜನೆಯಾಗಷ್ಟೇ ತೆಗೆದುಕೊಳ್ಳೋಣ.

- ಬಸವಪ್ರಸಾದ ಶಂಕರ ಸಂಕಪಾಳ,ನೇರ್ಲಿ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT