ADVERTISEMENT

ಇದು, ಸಭ್ಯರ ಆಟವೇ?

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 21 ನವೆಂಬರ್ 2019, 17:55 IST
Last Updated 21 ನವೆಂಬರ್ 2019, 17:55 IST

ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್ ಪಂದ್ಯಗಳು ಅನಾವರಣವಾಗುವತನಕ ಕ್ರಿಕೆಟ್‌ ಬಹುಮಟ್ಟಿಗೆ ‘ಸಭ್ಯರ ಆಟ’ ಎಂದೇ ಕರೆಸಿಕೊಳ್ಳುತ್ತಿತ್ತು. ಆಸ್ಟ್ರೇಲಿಯಾದ ಕೆರಿ ಪ್ಯಾಕರ್ ಮತ್ತು ಭಾರತದ ಲಲಿತ್ ಮೋದಿ ಅವರು ಕ್ರಿಕೆಟ್‌ನ ವಿನ್ಯಾಸವನ್ನು ಬದಲಿಸಿ, ಅದನ್ನು ವಾಣಿಜ್ಯೀಕರಣಗೊಳಿಸಿ, ಅದಕ್ಕೆ ಪಂಚತಾರಾ ಮೆರುಗು, ಉದ್ಯಮಿಗಳು- ರಾಜಕಾರಣಿಗಳ ನಂಟು, ಬೆಡಗು– ಬಿನ್ನಾಣ ಜೋಡಿಸಿದ ಮೇಲೆ, ಅದು ತನ್ನ ‘ಸಭ್ಯತನ’ವನ್ನು ಕಳೆದುಕೊಂಡಿದೆ.

ಈ ದಿನಗಳಲ್ಲಿ ಪಂದ್ಯವನ್ನು ಎಷ್ಟೇ ಪ್ರಾಮಾಣಿಕವಾಗಿ ಆಡಿದರೂ, ಪಂದ್ಯದ ಸೋಲು-ಗೆಲುವಿನಲ್ಲಿ ಅದನ್ನು ಕಾಣದಿರುವ ಸ್ಥಿತಿ ಉಂಟಾಗಿದೆ. ಶತಕಗಳ ಇತಿಹಾಸ ಇರುವ ಈ ಅಂತರರಾಷ್ಟ್ರೀಯ ಆಟ ಇಂತಹ ದುರವಸ್ಥೆಗೆ ಇಳಿಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ.

ರಮಾನಂದ ಶರ್ಮಾ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.