ADVERTISEMENT

ಶಿಸ್ತಿಲ್ಲದ ಕೆ-ಸೆಟ್ ಪರೀಕ್ಷೆ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 29 ಸೆಪ್ಟೆಂಬರ್ 2020, 15:41 IST
Last Updated 29 ಸೆಪ್ಟೆಂಬರ್ 2020, 15:41 IST

ಬೆಂಗಳೂರಿನ ಸರ್ಕಾರಿ ಕಾಲೇಜೊಂದರಲ್ಲಿ ಇತ್ತೀಚೆಗೆ ನಡೆದ ಕೆ-ಸೆಟ್ ಪರೀಕ್ಷೆ ಬರೆಯಲು ಹೋಗಿದ್ದೆ. ನನ್ನ ರಿಜಿಸ್ಟರ್ ನಂಬರನ್ನಾಗಲೀ ನಾನು ಕೂರಬೇಕಾದ ಕೊಠಡಿಯನ್ನಾಗಲೀ ಸೂಚನಾ ಫಲಕದಲ್ಲಿ ನೋಡಲು ತುಂಬಾ ಕಷ್ಟಪಡಬೇಕಾಯಿತು. ನಾಳೆ ಉಪನ್ಯಾಸಕರಾಗಬೇಕಾದವರು ಅನಾಗರಿಕರಂತೆ ವರ್ತಿಸುತ್ತಿದ್ದರು. ಅವರಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವ ಎಚ್ಚರಿಕೆಯಾಗಲೀ, ಮುಖಗವಸಾಗಲೀ ಕಾಣಲಿಲ್ಲ. ಹೆಣ್ಣುಮಕ್ಕಳಿಗೆ ಜಾಗ ಬಿಡದೆ ಒಬ್ಬರ ಮೇಲೊಬ್ಬರು ಬೀಳುವಂತೆ ಮುನ್ನುಗ್ಗುತ್ತಿದ್ದರು. ಪರೀಕ್ಷೆ ನಡೆಸುವ ಅಧಿಕಾರಿಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮಾಯವಾಗಿಬಿಟ್ಟಿದ್ದರು. ಹಾಗೂ ಹೀಗೂ ಕೊಠಡಿಯ ಒಳಹೊಕ್ಕರೆ ಅಲ್ಲಿಯೂ ಅವ್ಯವಸ್ಥೆ. ಸಕಾಲಕ್ಕೆ ಯಾವ ಪರೀಕ್ಷಾ ಕಾರ್ಯಗಳನ್ನೂ ಮೇಲ್ವಿಚಾರಕರು ಸರಿಯಾಗಿ ನಿರ್ವಹಿಸಲಿಲ್ಲ.

ಒಟ್ಟಾರೆ, ಕೋವಿಡ್ ನಿಯಮಗಳನ್ನು ಚಾಚೂ ಪಾಲಿಸದೆ ಇಂಥ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ, ನಮ್ಮಂಥ ಉದ್ಯೋಗಾಕಾಂಕ್ಷಿಗಳ ನಂಬಿಕೆಯನ್ನು ನಮ್ಮ ಸರ್ಕಾರಿ ಸಂಸ್ಥೆಗಳು ಹಾಳುಮಾಡದಿರಲಿ.

ಅಶ್ವಿನಿ ಎನ್. ಹರಿ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.