ADVERTISEMENT

ವಾಚಕರ ವಾಣಿ: ಕನ್ನಡಪರ ಹೋರಾಟಗಾರರಿಗೆ ಬೇಕು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 16:45 IST
Last Updated 3 ಜನವರಿ 2021, 16:45 IST

ಬೆಳಗಾವಿ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಿದ ಕನ್ನಡ ಹೋರಾಟಗಾರರೊಬ್ಬರ ಅಂಗಡಿ ಸುಡಲು ಕಿಡಿಗೇಡಿಗಳು ಯತ್ನಿಸಿರುವ ಸುದ್ದಿ (ಪ್ರ.ವಾ., ಜ. 2) ಓದಿದಾಗ, ಒಬ್ಬ ಕನ್ನಡ ಭಾಷಾ ಶಿಕ್ಷಕನಾಗಿರುವ ನನ್ನ ಮನಸ್ಸಿಗೆ ಬಹಳ ಆಘಾತವಾಯಿತು. ವೃತ್ತಿಯಲ್ಲಿ ಪ್ರತಿದಿನವೂ ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡ ನೆಲ-ಜಲದ ಬಗ್ಗೆ ಪಾಠ ಮಾಡುವವನಿಗೆ, ಈ ಸುದ್ದಿ ತಿಳಿದು ಹೀಗಾಗಿದ್ದು ಸಹಜವೇ.

ಕನ್ನಡ ಧ್ವಜ ನೆಟ್ಟಿರುವುದು ಕನ್ನಡ ನೆಲದ ಬೆಳಗಾವಿಯಲ್ಲಿ ತಾನೇ?! ಮತ್ತೆ ಈ ಕಿಡಿಗೇಡಿಗಳಿಗೆ ಏಕಿಷ್ಟು ಕ್ರೋಧ? ಆ ಹೋರಾಟಗಾರರೇನು ಮಹಾರಾಷ್ಟ್ರವನ್ನು ಅತಿಕ್ರಮಣ ಮಾಡಿ ಅಲ್ಲಿ ಧ್ವಜ ಸ್ಥಾಪಿಸಲು ಹೊರಟಿದ್ದರೇ? ಈ ಕೃತ್ಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಮತ್ತು ಕನ್ನಡಪರ ಬೆಂಬಲಿಗರಿಗೆ ಸೂಕ್ತ ರಕ್ಷಣೆ ಒದಗಿಸಬೇಕು.

-ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್, ಕೊಪ್ಪಳ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.