ADVERTISEMENT

ವಾಚಕರ ವಾಣಿ: ಚುನಾವಣೆ ಮುಂದೂಡಿಕೆ; ಸೂಕ್ತ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 19:30 IST
Last Updated 26 ಏಪ್ರಿಲ್ 2021, 19:30 IST

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಮುಂದೂಡುವುದು ಸರಿಯಲ್ಲ ಎಂದು ಆರ್.ಜಿ. ಹಳ್ಳಿ ನಾಗರಾಜ ಹೇಳಿದ್ದಾರೆ (ವಾ.ವಾ., ಏ. 26). ಆದರೆ ಪರಿಷತ್ತಿಗೆ ಮೇ 9ರಂದು ನಿಗದಿಯಾಗಿದ್ದ ಚುನಾವಣೆಯನ್ನು ಕೋವಿಡ್ ಸೋಂಕಿನ ಕಾರಣದಿಂದ ಮುಂದೂಡಲು ಸರ್ಕಾರವು ಚುನಾವಣಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿರುವುದು ಸರಿಯಾಗಿದೆ.

ಇಂತಹ ಸಂಕಷ್ಟದ ಸಮಯದಲ್ಲಿ ಯಾವುದೇ ಚುನಾವಣೆ ನಡೆಸುವುದು ಸೂಕ್ತವಲ್ಲ. ಜನರ ಜೀವಕ್ಕಿಂತ ಚುನಾವಣೆ ಮುಖ್ಯವಲ್ಲ. ಚುನಾವಣೆಯನ್ನು ಕೆಲವು ತಿಂಗಳುಗಳ ಕಾಲ ಮುಂದೂಡುವುದರಿಂದ ಹಲವಾರು ಜೀವಗಳನ್ನು ಉಳಿಸಬಹುದು.

ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮಾನಸಿಕ ಒತ್ತಡದಿಂದಾಗಿ ಕೋವಿಡ್ ಮುಂಜಾಗ್ರತಾ ನಿಯಮಗಳನ್ನು ಗಾಳಿಗೆ ತೂರಿ ಕೆಲಸ ಮಾಡುವ ಸಾಧ್ಯತೆಯೇ ಹೆಚ್ಚಾಗಿ ಇರುತ್ತಿತ್ತು. ಹಾಗಾಗಿದ್ದರೆ ಸೋಂಕು ಇನ್ನಷ್ಟು ವ್ಯಾಪಕವಾಗಲು ಅವಕಾಶವಾಗುತ್ತಿತ್ತು. ಈಗಾಗಲೇ ಸಾಂಸ್ಕೃತಿಕ ಕ್ಷೇತ್ರದ ಹಲವಾರು ಹಿರಿಕಿರಿಯರನ್ನು ಕೋವಿಡ್‌ನಿಂದಾಗಿ ಕಳೆದುಕೊಂಡಿದ್ದೇವೆ. ಚುನಾವಣೆಯಿಂದ ಇನ್ನಷ್ಟು ಜನರನ್ನು ಕಳೆದುಕೊಳ್ಳುವುದು ಬೇಡ.
-ಟಿ.ಸುರೇಂದ್ರ ರಾವ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.