ADVERTISEMENT

ದಾಖಲೆಗೆ ಸೂಚನೆ: ಆಯೋಗದ ಎಡವಟ್ಟು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 13 ಜುಲೈ 2021, 19:30 IST
Last Updated 13 ಜುಲೈ 2021, 19:30 IST

ಕರ್ನಾಟಕ ಲೋಕಸೇವಾ ಆಯೋಗವು ಚಿತ್ರಕಲಾ ಶಿಕ್ಷಕರ ತಾತ್ಕಾಲಿಕ ನೇಮಕಾತಿ ಪಟ್ಟಿಯಲ್ಲಿ, ಅಗತ್ಯ ದಾಖಲೆ ಗಳನ್ನು ಕಳುಹಿಸುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿದೆ. ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕಳೆದ ಐದು ವರ್ಷಗಳಿಂದ ನಡೆಯುತ್ತಿದೆ. ಇದು ಆರನೇ ಪಟ್ಟಿ. ಇದರ ಬಗ್ಗೆ ಇದೇ 7ರಂದು ಇ– ಮೇಲ್‌ ಮೂಲಕ ಮಾಹಿತಿ ಕಳುಹಿಸಲಾಗಿದ್ದು, ಯಾವ್ಯಾವ ದಾಖಲೆಗಳನ್ನು ಎಷ್ಟೆಷ್ಟು ನೀಡಬೇಕೆಂದು ಹೇಳಿಲ್ಲ. ಜೊತೆಗೆ ದಾಖಲೆಗಳನ್ನು ಕಳುಹಿಸಲು ಕೊನೆಯ ದಿನಾಂಕ 9 ಎಂದು ಹೇಳಲಾಗಿದೆ. ಬಹಳಷ್ಟು ಮಂದಿಗೆ ಈ ಬಗ್ಗೆ ಲಿಖಿತ ಪತ್ರವು 10ರಂದು ತಲುಪಿದೆ. ಇಂತಹ ಸಂದರ್ಭದಲ್ಲಿ ಅವರು ದಾಖಲೆಗಳನ್ನು ಕಳುಹಿಸಿಕೊಡುವುದಾದರೂ ಹೇಗೆ? ಈ ತಪ್ಪಿಗೆ ಯಾರು ಹೊಣೆ? ಆಯೋಗವು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅಗತ್ಯ ಸಮಯವನ್ನು ನೀಡಬೇಕು.

- ಟಿ.ಪ್ರಭಾಕರ್‌,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT