ADVERTISEMENT

ಭಾಷೆ, ಸಂಸ್ಕೃತಿ: ದಿಟ್ಟ ಹೆಜ್ಜೆ ಇಡಬೇಕು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಮಾರ್ಚ್ 2021, 19:30 IST
Last Updated 25 ಮಾರ್ಚ್ 2021, 19:30 IST

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಕಾರ್ಯವಾಹರಾಗಿ ಕನ್ನಡಿಗರಾದ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆ ಆಗಿರುವುದು ಸರಿಯಷ್ಟೆ. ಜನಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಭಾರತೀಯ ಭಾಷೆಗಳೇ ಭಾರತದ ಶಕ್ತಿ ಎಂದು ಪ್ರತಿಪಾದಿಸಿದ್ದರು. ದುರಂತ ಎಂದರೆ, ಒಕ್ಕೂಟ ಭಾರತದ ಸಂವಿಧಾನ ಜಾರಿಯಾದ ದಿನದಿಂದ ಹಿಡಿದು ಇಂದಿನವರೆಗೂ ಅವ್ಯಾಹತವಾಗಿ ಹಿಂದಿಯೊಂದನ್ನು ಮೆರೆಸಿ, ಉಳಿದ ಭಾರತೀಯ ಭಾಷೆಗಳನ್ನು ಕಡೆಗಣಿಸಲಾಗಿದೆ.

ಭಾರತ ಸರ್ಕಾರದ ಸೇವೆಗಳು ಆಯಾ ರಾಜ್ಯ ಭಾಷೆಗಳಲ್ಲಿ ಸಿಗಬೇಕು, ಒಕ್ಕೂಟ ಸರ್ಕಾರ ನಡೆಸುವ ಕೇಂದ್ರೀಯ ನೇಮಕಾತಿಯ ಎಲ್ಲಾ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅವಕಾಶ ಇರಬೇಕು. ಎಲ್ಲಾ ಬಗೆಯ ಉನ್ನತ ಶಿಕ್ಷಣವು ಆಯಾ ರಾಜ್ಯ ಭಾಷೆಗಳಲ್ಲಿ ಸಾಕಾರ ಆಗಬೇಕು. ಈ ದಿಸೆಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರು ಗಂಭೀರ ಪ್ರಯತ್ನ ಮಾಡಬೇಕಿದೆ. ಕೇಂದ್ರದಲ್ಲಿನ ಈಗಿನ ಸರ್ಕಾರದ ಮೇಲೆ ಈ ದಿಸೆಯಲ್ಲಿ ಅವರು ಪ್ರಭಾವ ಬೀರಬೇಕು. ಭಾರತೀಯ ಸಂಸ್ಕೃತಿಯ ಚೆಲುವು ಇರುವುದೇ ಭಾರತೀಯ ಭಾಷೆಗಳಲ್ಲಿ. ಭಾಷೆ, ಸಂಸ್ಕೃತಿ ಎಂದು ಬರೀ ಭಾವನಾತ್ಮಕವಾಗಿ ಮಾತನಾಡಿದರೆ ಸಾಲದು. ಬದಲಾಗಿ ದಿಟ್ಟ ಹೆಜ್ಜೆಗಳನ್ನು ಇಡಬೇಕು. ಭಾಷೆಗಳ ಅಳಿವು ಎಂದರೆ ಭಾರತದ ಅಳಿವು ಎಂದೇ ಅರ್ಥ.

- ಗಿರೀಶ್ ಮತ್ತೇರ,ಹನುಮಂತ ದೇವರ ಕಣಿವೆ, ಹೊಳಲ್ಕೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.