ADVERTISEMENT

ಮಹಿಳೆಯರಿಗೆ ಕಿರುಕುಳ ತಪ್ಪಲಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 19:30 IST
Last Updated 6 ಜುಲೈ 2020, 19:30 IST

‘ಲೈಂಗಿಕ ಕಿರುಕುಳದ ಮತ್ತೊಂದು ಮುಖ’ ಲೇಖನವು (ಪ್ರ.ವಾ., ಜುಲೈ 5) ವಕ್೯ ಫ್ರಂ ಹೋಮ್‌ನಲ್ಲೂ ಸ್ತ್ರೀಯರು ಆನ್‌ಲೈನ್ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿರುವ ಬಗ್ಗೆ ಸಕಾ೯ರದ ಗಮನಸೆಳೆದಿದೆ. ಕಚೇರಿಯ ಮ್ಯಾನೇಜರ್ ಅಥವಾ ಟೀಂ ಲೀಡರ್ ಉದ್ದೇಶಪೂರ್ವಕವಾಗಿ ವಿಡಿಯೊ ಕಾಲ್ ಮಾಡಲು ತಿಳಿಸುವುದು, ಅಸಭ್ಯ ವತ೯ನೆ ತೋರುವುದು, ಅವೇಳೆಯಲ್ಲಿ ಕರೆ ಮಾಡಿ ಅನವಶ್ಯಕವಾಗಿ ಗಂಟೆಗಟ್ಟಲೆ ಮಾತನಾಡುವುದು ಪೈಶಾಚಿಕ ಕೃತ್ಯವೇ ಸರಿ. ಇದರಿಂದ ಕೌಟುಂಬಿಕ ಕಲಹ ಹಾಗೂ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಇಂತಹ ಕಿರುಕುಳವನ್ನೂ ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಆಗುವ ಲೈಂಗಿಕ ಕಿರುಕುಳ ತಡೆ ಕಾಯ್ದೆಯಡಿ ತರಲು ಸಕಾ೯ರ ಸುಗ್ರೀವಾಜ್ಞೆ ಹೊರಡಿಸಿ ಮಹಿಳೆಯರ ಹಿತ ಕಾಪಾಡಬೇಕು.

- ಪಿ.ಗಂಗಾಂತರಂಗ ಎಸ್. ಬಾಬು,ಚಿತ್ರದುಗ೯

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT