ADVERTISEMENT

ಬ್ಯಾಂಕಿಂಗ್ ಉದ್ಯಮ ಹೀಗೂ ವರ್ಧಿಸಲಿ...!

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 19:31 IST
Last Updated 26 ಏಪ್ರಿಲ್ 2022, 19:31 IST

ನನ್ನ ಕಿರಿಯ ಪ್ರತಿಭಾವಂತ ಮಿತ್ರನೊಬ್ಬ ಕೆಇಟಿ ಪರೀಕ್ಷೆ ಬರೆದಿದ್ದಾನೆ. ಉತ್ತಮ ರ್‍ಯಾಂಕ್‌ ನಿರೀಕ್ಷೆಯಲ್ಲೂ ಇದ್ದಾನೆ. ಆದರೂ ಉಪನ್ಯಾಸಕ ಹುದ್ದೆಯ ಆಸೆ ದೂರವೇ ಎನ್ನುತ್ತಾನೆ! ಒಳ್ಳೆಯ ರ್‍ಯಾಂಕ್‌ಗೆ ನೀಡಬೇಕಾದ ಲಂಚ ₹ 30 ಲಕ್ಷವಂತೆ. ರ್‍ಯಾಂಕ್‌ನ ಅನುಪಾತ ಆಧರಿಸಿ ಲಂಚದ ಮೊತ್ತವೂ ಹೆಚ್ಚಾಗುವ ಒಳಸುಳಿವಿದೆಯಂತೆ.

ಈ ಸವಾಲನ್ನು ಬ್ಯಾಂಕಿಂಗ್ ಉದ್ಯಮ ಹೊಸ ವೆಂಚರ್‌ ಮಾಡಿಕೊಳ್ಳಬಾರದೇಕೆ? ಪ್ರತಿಯೊಂದು ಖಾಸಗಿ, ಸಹಕಾರಿ, ಸರ್ಕಾರಿ ಬ್ಯಾಂಕಿಗೂ ಇಂತಿಷ್ಟು ‘ಉದ್ಯೋಗ ಲಂಚದ ಸಾಲ’ ಎಂದು ಸರ್ಕಾರ ಗುರಿ ನಿಗದಿಗೊಳಿಸಿದರಾಯಿತು! ಅಭ್ಯರ್ಥಿಗಳು ಉದ್ಯೋಗವನ್ನು ಅಡ ಇಟ್ಟು ಸಾಲ ಪಡೆದುಕೊಳ್ಳುತ್ತಾರೆ. ಆ ಉದ್ಯೋಗಕ್ಕೆ, ಲಂಚದ ಮೊಬಲಗಿಗೆ ತಕ್ಕಂತೆ ಪ್ರೀಮಿಯಂ ನಿಗದಿಗೊಳಿಸಿ ವಿಮೆ ಕಡ್ಡಾಯ ಮಾಡಿದರೆ, ಬ್ಯಾಂಕಿಂಗ್ ವ್ಯವಹಾರ ಕುದುರುವುದರ ಜತೆಜತೆಗೇ ವಿಮೆ ಉದ್ಯಮ ಸಹ ಚಿಗಿತುಕೊಳ್ಳುತ್ತದೆ! ದೇಶದ ಆರ್ಥಿಕತೆ?... ಆಳುವವರು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬಿಟ್ಟು ದಶಕಗಳೇ ಆಗಿಹೋಗಿವೆಯಲ್ಲವೇ?!

ಆರ್.ಕೆ.ದಿವಾಕರ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.