ADVERTISEMENT

ವಾಚಕರ ವಾಣಿ: ಸಂಕುಚಿತ ಮನಃಸ್ಥಿತಿ ಬದಲಾಗಲಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 19:31 IST
Last Updated 7 ನವೆಂಬರ್ 2022, 19:31 IST

ನಾಲ್ಕನೆಯ ಬಾರಿಯೂ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಬೇಸರಗೊಂಡ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ (ಪ್ರ.ವಾ., ನ. 7) ಓದಿ, ಜನ ಇನ್ನೂ ಯಾವ ಯುಗದಲ್ಲಿದ್ದಾರೆ ಅನ್ನಿಸಿತು. ಇಂದಿನ ಸಾಧನೆಯ ಹಾದಿಯಲ್ಲಿ ಹೆಣ್ಣು ಹೊಸ ಮೈಲಿಗಲ್ಲನ್ನು ನಿರ್ಮಿಸಿ ಸಾಗುತ್ತಿದ್ದಾಳೆ. ವಚನಗಳ ಕಾಲದಿಂದ ಹಿಡಿದು ಇಂದಿನ ಅಂತರಿಕ್ಷದ ಕಾಲದವರೆಗೂ ಯಶಸ್ಸಿನ ಮೆಟ್ಟಿಲೇರುತ್ತಾ ಹೋಗುತ್ತಿರುವ ಹೆಣ್ಣು ಮಕ್ಕಳು ಯಾವುದರಲ್ಲಿ ಕಡಿಮೆಯಿದ್ದಾರೆ? ಅತಿ ಸಂತಾನವೇ ತಪ್ಪಾಗಿರುವಾಗ, ಗಂಡು ಮಗುವಿಗಾಗಿ ಹಂಬಲಿಸಿ ನಾಲ್ಕು ಮಕ್ಕಳಾಗುವ ತನಕ ಕಾದು ಸಾವಿಗೆ ಶರಣಾದ ಇಂತಹ ಮನಃಸ್ಥಿತಿಯ ತಂದೆಗೆ ಏನು ಹೇಳುವುದು? ಅಮ್ಮ, ಅಕ್ಕ, ತಂಗಿ, ಅಜ್ಜಿ, ಮಡದಿ ಬೇಕು, ಆದರೆ ಮಗಳು ಬೇಡ! ಮನುಷ್ಯನ ಇಂತಹ ಸಂಕುಚಿತ ಮನಃಸ್ಥಿತಿ ಬದಲಾಗಬೇಕಿದೆ.

–ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT