ADVERTISEMENT

ನಾಡಿನ ಘನ ಪರಂಪರೆ ಸ್ಮರಿಸೋಣ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2022, 20:00 IST
Last Updated 31 ಅಕ್ಟೋಬರ್ 2022, 20:00 IST

ಎರಡು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸವುಳ್ಳ, ಶಾಸ್ತ್ರೀಯ ಸ್ಥಾನಮಾನ ಪಡೆದ ನಮ್ಮ ಹೆಮ್ಮೆಯ ‘ಕನ್ನಡ ಭಾಷೆ’ ಕೇವಲ ನಮಗೆ ಭಾಷೆಯಲ್ಲ, ನಮ್ಮ ಸ್ವಾಭಿಮಾನದ ಪ್ರತೀಕ, ನಮ್ಮ ಭಾವನೆಗಳ ಪಾರಮಾರ್ಥಿಕ ಸಂಕೇತವೂ ಹೌದು. ಚೆನ್ನಮ್ಮಾಜಿಯ ಸಾಹಸಗಾಥೆ, ರಾಯಣ್ಣನ ಶೌರ್ಯ, ಪರಾಕ್ರಮ ಹಾಗೂ ಗುರು ಬಸವಣ್ಣ
ನವರ ವಚನಸುಧೆ, ಕದಂಬರ ಕನ್ನಡ ಪ್ರೇಮ, ಶ್ರೀಕೃಷ್ಣದೇವರಾಯನ ಶ್ರೀಮಂತ ಸಾಮ್ರಾಜ್ಯ, ದಕ್ಷಿಣಾಧಿಪತಿಯಾಗಿ
ಅಫ್ಗಾನಿಸ್ತಾನದವರೆಗೂ ಆಳಿದ ಕನ್ನಡ ದೊರೆ ಇಮ್ಮಡಿ ಪುಲಿಕೇಶಿ, ಕವಿ ಕಾಳಿದಾಸ, ರನ್ನ, ಪಂಪನ ಆದಿಯಾಗಿ ಕುವೆಂಪು, ಕಂಬಾರರವರೆಗೂ ಛಾಪು ಮೂಡಿಸಿರುವ ಕನ್ನಡದ ಹಿರಿಮೆ ಅನಂತವಾದುದು.

ರಾಜ್ಯೋತ್ಸವದ ಈ ಸುಸಂದರ್ಭದಲ್ಲಿ ನಮ್ಮ ನಾಡಿನ ಭವ್ಯ ಪರಂಪರೆಯನ್ನು ಸ್ಮರಿಸುವ ಕೆಲಸವಾಗಬೇಕು. ನಾಡಿಗಾಗಿ ಹೋರಾಡಿದ ಮಹನೀಯರ ವಿಚಾರಗಳನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕು. ಗಡಿ ಭಾಗಗಳಲ್ಲಿ, ಕನ್ನಡವನ್ನು ಕಡೆಗಣಿಸಲಾಗುತ್ತಿರುವ ಪ್ರದೇಶಗಳಲ್ಲಿಯೂ ಕನ್ನಡ ಡಿಂಡಿಮ ಮೊಳಗಲು ನಾವೆಲ್ಲ ಇಂದು ಶ್ರಮಿಸಬೇಕಾಗಿದೆ. ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಕನ್ನಡ ಭಾಷೆಯಲ್ಲಿ ಪರೀಕ್ಷೆ ನಡೆಸಲು ನಾವೆಲ್ಲ ಹೋರಾಡಬೇಕಿದೆ. ಕನ್ನಡದ ಕಂಪು ಜಗದಗಲ ಸುವಾಸನೆ ಬೀರಲಿ, ರಾಜ್ಯೋತ್ಸವ ನಾಡಿನ ನಿತ್ಯೋತ್ಸವವಾಗಿ ಬದಲಾಗಲಿ.

-ಲೋಹಿತ ರಾಮಣ್ಣಾ ಹಸೂರೆ, ಹೊನ್ನಿಹಳ್ಳಿ, ಹುಕ್ಕೇರಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.