ADVERTISEMENT

ವಾಚಕರ ವಾಣಿ | ಜನಪ್ರತಿನಿಧಿಗಳು ಸೌಜನ್ಯ ರೂಢಿಸಿಕೊಳ್ಳಲಿ

​ಪ್ರಜಾವಾಣಿ ವಾರ್ತೆ
Published 25 ಮೇ 2022, 19:26 IST
Last Updated 25 ಮೇ 2022, 19:26 IST

ಹಲವಾರು ಕಾರಣಗಳಿಗಾಗಿ ಸರ್ಕಾರಿ ಕಚೇರಿಗಳು, ಶಾಲಾ- ಕಾಲೇಜುಗಳಿಗೆ ಭೇಟಿ ನೀಡುವ ಹಾಗೂ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಕೆಲವು ಶಾಸಕರು ಹಾಗೂ ಸಚಿವರು ಅಲ್ಲಿನ ನೌಕರರು, ಅಧಿಕಾರಿಗಳು, ಶಿಕ್ಷಕರು ಮತ್ತು ಉಪನ್ಯಾಸಕರೊಂದಿಗೆ ನಡೆದುಕೊಳ್ಳುವ ರೀತಿ ಅತ್ಯಂತ ಅನುಚಿತವಾಗಿ ಇರುತ್ತದೆ. ಅವರಿಗೆ ಗೌರವ ತೋರದೆ ಏಕವಚನದಿಂದ ಸಂಬೋಧಿಸುತ್ತಾ ದರ್ಪ ತೋರಿಸುತ್ತಾರೆ. ತಮ್ಮಂತೆ ಉಳಿದವರಿಗೂ ಗೌರವ, ಆತ್ಮಾಭಿಮಾನ ಇರುತ್ತದೆ ಎಂಬುದನ್ನು ಮರೆತು ಸಾರ್ವಜನಿಕರ ಮುಂದೆ, ಸಹೋದ್ಯೋಗಿಗಳ ಮುಂದೆ ಬೈಯುವುದು ಸಾಮಾನ್ಯವಾಗಿ ಬಿಟ್ಟಿದೆ.

ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರು ಹಾಗೂ ಪ್ರಾಚಾರ್ಯರಿಗೆ ಕೆಲವೊಮ್ಮೆ ವಿದ್ಯಾರ್ಥಿಗಳ ಮುಂದೆಯೇ ಬೈದು ಅವಮಾನಿಸುತ್ತಾರೆ. ಇದರಿಂದ ಅವರ ಮನಸ್ಸಿಗೆ ಎಷ್ಟು ಆಘಾತವಾಗುತ್ತದೆ, ವಿದ್ಯಾರ್ಥಿಗಳು ಏನು ತಿಳಿದುಕೊಳ್ಳುತ್ತಾರೆ ಎಂಬ ಬಗ್ಗೆಯೂ ಅವರು ಯೋಚಿಸುವುದಿಲ್ಲ. ಇನ್ನು ಫೋನಿನ ಮೂಲಕವಂತೂ ನೌಕರರು ಮತ್ತು ಅಧಿಕಾರಿಗಳನ್ನು ಅನೇಕ ಜನಪ್ರತಿನಿಧಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣಗಳು ವೈರಲ್‌ ಆದ ವಿಡಿಯೊ, ಆಡಿಯೊಗಳ ಮೂಲಕ ಬಹಿರಂಗಗೊಳ್ಳುತ್ತಿರುತ್ತವೆ. ಆದ್ದರಿಂದ ಜನಪ್ರತಿನಿಧಿಗಳು ಮೊದಲು ಇತರರೊಂದಿಗೆ ಸೌಜನ್ಯದಿಂದ ಮಾತನಾಡುವುದನ್ನು, ವರ್ತಿಸುವುದನ್ನು ರೂಢಿಸಿಕೊಳ್ಳಬೇಕು. ಆ ಮೂಲಕ ಇತರರಿಗೆ ಮಾದರಿಯಾಗಬೇಕು.
–ಸದಾಶಿವ ಎಂ. ಮುರಗೋಡ,ರಾಮದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT