ADVERTISEMENT

ಏರಿದ ಅಂಕ: ಬೇಕಾಗಿದೆ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 19:30 IST
Last Updated 22 ಜುಲೈ 2021, 19:30 IST

ಈ ಬಾರಿಯ ಪಿಯು ಫಲಿತಾಂಶ ನೋಡಿದರೆ ಯಾಕೋ ಸ್ವಲ್ಪ ಮಟ್ಟಿನ ಗೊಂದಲ ಉಂಟಾಗುತ್ತದೆ. 2,239 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆದಿದ್ದಾರೆ. ಹಿಂದೆ ಒಬ್ಬರೋ ಇಬ್ಬರೋ ಈ ತರಹ ಅಂಕ ತೆಗೆಯುತ್ತಿದ್ದರು. ಉನ್ನತ ಶ್ರೇಣಿ ಹಾಗೂ ಪ್ರಥಮ ಶ್ರೇಣಿ ತೆಗೆದವರ ಸಂಖ್ಯೆಯೂ ಸಿಕ್ಕಾಪಟ್ಟೆ ಏರಿದೆ. ಹಾಗಾದರೆ ಇದರ ಅರ್ಥ ಏನು? ಬುದ್ಧಿವಂತರ ಸಂಖ್ಯೆಯಲ್ಲಿ ಏರಿಕೆ ಆಗಿದೆ ಅಂತಲೋ ಅಥವಾ ಇದು ಕೊರೊನಾ ಕೊಡುಗೆ ಅಂತಲೋ ಎಂಬುದನ್ನು ತಿಳಿಯಬೇಕಾಗಿದೆ ನಾವು.

– ಚಾವಲ್ಮನೆ ಸುರೇಶ್ ನಾಯಕ್,ಹಾಲ್ಮತ್ತೂರು, ಕೊಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT