ADVERTISEMENT

ವಾಚಕರ ವಾಣಿ| ಭ್ರಷ್ಟರ ಆಸ್ತಿ: ಕಾಡುವ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 19:45 IST
Last Updated 20 ಜೂನ್ 2022, 19:45 IST

ವಿವಿಧ ಇಲಾಖೆಗಳ ಹಲವು ಅಧಿಕಾರಿಗಳ ಅಕ್ರಮ ಸಂಪಾದನೆ ಬಗ್ಗೆ ಭ್ರಷ್ಟಾಚಾರ ನಿಗ್ರಹ ದಳವು ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ ವಿವರವನ್ನು ನೋಡಿದಾಗ ದಿಗ್ಭ್ರಮೆ ಉಂಟಾಯಿತು. ಇಂತಹ ದುರಾಸೆ, ದುರ್ಬುದ್ಧಿಯ ಅಧಿಕಾರಿಗಳಿಂದ ಪ್ರಾಮಾಣಿಕ ಅಧಿಕಾರಿಗಳೂ ತಲೆ ತಗ್ಗಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಉಪ್ಪು ತಿಂದವರು ನೀರು ಕುಡಿದೇ ಕುಡಿಯುತ್ತಾರೆ ಸರಿ, ಆದರೆ ಆ ಭ್ರಷ್ಟರಿಗೆ ಶಿಕ್ಷೆಯ ಪ್ರಮಾಣ ಎಂತಹದ್ದು? ವಶಪಡಿಸಿಕೊಂಡಿರುವ ಆಸ್ತಿಯನ್ನು ಮುಂದೇನು ಮಾಡುತ್ತಾರೆ ಎಂಬಂಥ ಪ್ರಶ್ನೆಗಳು ಕಾಡುತ್ತವೆ. ಇವು ಕೇವಲ ಪ್ರಶ್ನೆಗಳಾಗಿ ಉಳಿಯದೆ ಉತ್ತರದ ದಿಕ್ಕಿನಲ್ಲಿ ಪ್ರವಹಿಸಲಿ ಎಂದು ಆಶಿಸೋಣ.

- ಮಂಜುನಾಥ್ ಜೈನ್ ಎಂ.ಪಿ.,ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT