ADVERTISEMENT

ವಾಚಕರ ವಾಣಿ| ಪೊಲೀಸ್‌ ಎಂದರೆ ‘ಭರವಸೆ’...!

​ಪ್ರಜಾವಾಣಿ ವಾರ್ತೆ
Published 10 ಮೇ 2020, 20:00 IST
Last Updated 10 ಮೇ 2020, 20:00 IST

ಲಾಕ್‌ಡೌನ್‌ನ ಈ ಸಮಯದಲ್ಲಿ ನಮ್ಮ ರಾಜ್ಯದ ಜನ ನಂಬಿರುವುದು, ಆರೋಗ್ಯ ಸಿಬ್ಬಂದಿಯನ್ನು ಬಿಟ್ಟರೆ ಪೊಲೀಸ್‌ ಇಲಾಖೆಯನ್ನು. ಕೆಲವು ದಕ್ಷ, ಪ್ರಾಮಾಣಿಕ ಪೊಲೀಸ್‌ ಅಧಿಕಾರಿಗಳು ಹಗಲಿರುಳೆನ್ನದೇ ಜನರಿಗಾಗಿ, ರಾಜ್ಯಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಕೆಲವು ಅಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಮದ್ಯ ಹಾಗೂ ಸಿಗರೇಟ್ ಕಂಪನಿಗಳೊಂದಿಗೆ ಶಾಮೀಲಾಗಿರುವುದು ನಾಚಿಕೆಗೇಡಿನ ಸಂಗತಿ.

ಪೊಲೀಸ್‌ ಎಂದರೆ ‘ಭಯವಲ್ಲ, ಭರವಸೆ’ ಎಂಬ ಮಾತಿಗೆ ಅನ್ವರ್ಥವಾಗಿ ನಡೆದುಕೊಂಡ ದಕ್ಷ ಅಧಿಕಾರಿಗಳು ನಮ್ಮಲ್ಲಿ ಇದ್ದರು. ಈಗಲೂ ಇದ್ದಾರೆ. ಇಂತಹವರ ಹೆಸರು ಕೇಳಿದರೆ ಪೊಲೀಸ್‌ ಇಲಾಖೆಯ ಮೇಲೆ ಗೌರವ ಹೆಚ್ಚಾಗುತ್ತದೆ. ಆಡಳಿತಕ್ಕೆ ಹೊಸದಾಗಿ ಸೇರುವ ಅಧಿಕಾರಿಗಳಿಗೆ ಇಂಥವರು ಸ್ಫೂರ್ತಿ. ‘ಬೇಲಿಯೇ ಎದ್ದು ಹೊಲ ಮೇಯುವ’ ಹಾಗೆ ಕೆಲವು ಅಧಿಕಾರಿಗಳು ಇಲಾಖೆಯ ಮೇಲೆ ಭ್ರಷ್ಟತೆಯ ಕಳಂಕ ಹೊರಿಸುತ್ತಿದ್ದಾರೆ. ಸರ್ಕಾರ ಇಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಆಯಕಟ್ಟಿನ ಜಾಗಗಳಿಗೆ ದಕ್ಷ ಅಧಿಕಾರಿಗಳನ್ನು ನಿಯೋಜಿಸಬೇಕು.

ನವೀನ್ ಕೊಡವತ್ತಿ,ಹುಲಿಯೂರುದುರ್ಗ, ಕುಣಿಗಲ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.