ADVERTISEMENT

ಭಾನುವಾರದ ಪುರವಣಿಗೆ ಸಹೃದಯರ ಸ್ಪಂದನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 19:31 IST
Last Updated 20 ಜುಲೈ 2019, 19:31 IST

ಮಾಹಿತಿಪೂರ್ಣ ಲೇಖನ

ಒಡೆಯರ್ ಕುರಿತ ಲೇಖನ ಮಾಹಿತಿಪೂರ್ಣವಾಗಿತ್ತು. ನಾಡಿಗೆ ಅಗಣಿತ ಸೇವೆ ಸಲ್ಲಿಸಿದ ಒಡೆಯರ್ ಅವರ ಅಸಾಮಾನ್ಯ ವ್ಯಕ್ತಿತ್ವವನ್ನು ಅನಾವರಣಗೊಳಿಸಿತು. ಇದು ಸಮಯೋಚಿತ ಲೇಖನ. ಲೇಖನ ಬರೆದ
ವಿದ್ವಾನ್ ಎಂ. ಶಿವಕುಮಾರಸ್ವಾಮಿ ಅವರಿಗೆ ಧನ್ಯವಾದಗಳು.

-ಬಸವರಾಜ ಹೂಗಾರ, ಇಳಕಲ್

ADVERTISEMENT

ಕನಸುಗಾರ ಒಡೆಯರ್

‘ವಿಶಾಲ ಕರ್ನಾಟಕದ ಕನಸುಗಾರ’ ಮೈಸೂರು ರಾಜ್ಯದ ಜಯಚಾಮರಾಜ ಒಡೆಯರ್. ಮೈಸೂರು ಸಂಸ್ಥಾನದ ಮಹಾರಾಜರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಬಗ್ಗೆ ಹತ್ತು ಹಲವು ಸಂಗತಿಗಳನ್ನು ತಿಳಿದು ಸಂತೋಷವಾಯಿತು. ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ರಾಜ್ಯಪಾಲರಾಗಿದ್ದ ಒಡೆಯರ್ ಅವರ ಚಿತ್ರ ನೋಡಿ ಆನಂದವಾಯಿತು.

-ಬಸಪ್ಪ ಮುಳ್ಳೂರ, ರಾಮದುರ್ಗ

ಮಹಾರಾಜರೇ ಎದುರು ಬಂದರು

ಒಡೆಯರ್ ಕುರಿತು ಲೇಖನ ಪ್ರಕಟಿಸಿದ ಭಾನುವಾರದ ಪುರವಣಿಯನ್ನು ಓದಿ, ಕಣ್ಣಿಗೆ ಒತ್ತಿಕೊಂಡು ಮಹದಾನಂದಪಟ್ಟೆ. ಮಹಾರಾಜರೇ ನಮ್ಮ ಮುಂದೆ ಬಂದು ನಿಂತಂತೆ ಚಿತ್ರಿಸಲಾಗಿದೆ. ನಮ್ಮ ಆಡಳಿತ ವ್ಯವಸ್ಥೆಯು ತಕ್ಷಣ ಕಾರ್ಯೋನ್ಮುಖವಾಗಿ ಅವರ ಜನ್ಮಶತಮಾನೋತ್ಸವವನ್ನು ನಾಡಿನ ಆದ್ಯಂತ ನಡೆಯುವಂತೆ ಮಾಡಬೇಕು.

-ಎ.ಕೆ. ಅನಂತಮೂರ್ತಿ, ಬೆಂಗಳೂರು

‘ಎಲ್ಲಾ ಒಳ್ಳೆಯದಾಗುತ್ತದೆ’

‘ನಿವಾಳಿಸಿ ಬಿಟ್ಟ ಕೋಳಿ’ ಕಥೆ ಎಲ್ಲ ಭಾವನೆಗಳನ್ನು ಒಳಗೊಂಡಿದೆ. ನಿಮ್ಮಿಯ ಪಾತ್ರ ಬಹಳ ವಿಶಿಷ್ಟವಾಗಿದೆ. ಅವಳ ತಾಯಿ ವಿಮಲಮ್ಮ ಆಕೆಯ ಹೆರಿಗೆಯ ಬಗ್ಗೆ ಆಕಾಶವೇ ತಲೆ ಮೇಲೆ ಬಿದ್ದ ಹಾಗೆ ಚಿಂತೆ ಮಾಡುತ್ತಿದ್ದರೂ, ನಿಮ್ಮಿ ಧೃತಿಗೆಡದೆ ಇದ್ದಳು. ‘ಎಲ್ಲಾ ಒಳ್ಳೆಯದಾಗುತ್ತದೆ’ ಎಂದು ನಂಬಿದ್ದಳು. ಮನುಷ್ಯನಲ್ಲಿ ಧನಾತ್ಮಕ ಚಿಂತನೆ ಮುಖ್ಯ. ಇದರಿಂದ ಏನು ಬೇಕಿದ್ದರೂ ಸಾಧಿಸಬಹುದು.

-ಆರ್. ಪೂಜಿತಾ, ಬೆಂಗಳೂರು.

ಸಾಮಾಜಿಕ ಪಿಡುಗು

ಲಿಂಗಾಧಾರಿತ ವೇತನ ತಾರತಮ್ಯವು ಸಾಮಾಜಿಕ ಪಿಡುಗಾಗಿ ಬೆಳೆದಿದೆ. ಈ ಬಗ್ಗೆ ಪುರವಣಿಯಲ್ಲಿ ಪ್ರೀತಿ ನಾಗರಾಜ ಬರೆದಿರುವುದು ಸಕಾಲಿಕ. ಪುರುಷರಿಗಿಂತಲೂ ಮಹಿಳೆ ಹೆಚ್ಚು ಕೆಲಸ ಮಾಡಿದರೂ ಅವರಿಗೆ ಸಿಗುವ ವೇತನ ಕಡಿಮೆ. ಮಹಿಳೆಯರ ಪರವಾಗಿ ಎಷ್ಟೇ ಕಾನೂನು ತಂದರೂ , ಈ ತಾರತಮ್ಯ ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ. ಹಳ್ಳಿಗಳಲ್ಲಿ ಮಹಿಳೆಯರಿಗೆ ನೀಡುವ ಕೂಲಿ ತುಂಬಾ ಕಡಿಮೆ. ದೇಶದ ಜಿಡಿಪಿಯಲ್ಲಿ ಮಹಿಳೆಯರ ಕೊಡುಗೆಯೇ ಹೆಚ್ಚಿದೆ.

-ನವೀನ್ ಕೊಡವತ್ತಿ, ಕುಣಿಗಲ್

ಮೂಗು ಮತ್ತು ಸೌಂದರ್ಯ

ಮುಖದ ಸೌಂದರ್ಯಕ್ಕೆ ಮೂಗು ಮುಖ್ಯ. ಪುರವಣಿಯಲ್ಲಿ ‘ಹಾಗೂ ಹೀಗೂ ಮೂಗೂ’ ಎಂದು ಶ್ರೀರಂಜನಿ ಅಡಿಗರು, ಮೂಗನ್ನು ಯಾವ ರೀತಿ ಹಾವ ಭಾವದಿಂದ ಬಳಸಿ ತೋರಿಸಬಹುದೆಂದು ಬಹಳ ಚೆನ್ನಾಗಿ ಬರೆದಿದ್ದಾರೆ. ಮೂಗಿಲ್ಲದವರ ಬಗ್ಗೆ ಅನುಕಂಪ ತೋರಿದ್ದಾರೆ.

-ಎಂ.ಎಚ್. ಮೊಕಾಶಿ, ವಿಜಯಪುರ

ಪ್ರತಿಕ್ರಿಯೆಗಳಿಗೆ ಸ್ವಾಗತ

ಭಾನುವಾರದ ಪುರವಣಿಯ ಬರಹಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಗಳಿಗೆ ಸ್ವಾಗತ.
ಬರಹಗಳು ಚುಟುಕಾಗಿ ಇರಲಿ. ಪ್ರತಿಕ್ರಿಯೆಗಳನ್ನು ಕಳುಹಿಸಬೇಕಾದ ವಿಳಾಸ:
ಭಾನುವಾರದ ಪುರವಣಿ, ಪ್ರಜಾವಾಣಿ, # 75,
ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560 001
ಇಮೇಲ್‌: bhanuvara@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.