ADVERTISEMENT

ಏನದು ಪೊಲೀಸ್ ಬುದ್ಧಿ?

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 4:48 IST
Last Updated 30 ನವೆಂಬರ್ 2019, 4:48 IST
   

‘ಅನುಕೂಲಕ್ಕೆ ತಕ್ಕಂತೆ ಮಾತನಾಡುವ ಪೊಲೀಸ್‌ ಬುದ್ಧಿಯನ್ನು ಇನ್ನೂ ಬಿಟ್ಟಿಲ್ಲವಾ’ ಎಂದು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ, ಚುನಾವಣಾ ಪ್ರಚಾರದ ವೇಳೆ ಅಭ್ಯರ್ಥಿ ಬಿ.ಸಿ.ಪಾಟೀಲ ಅವರನ್ನು ಇತ್ತೀಚೆಗೆ ಟೀಕಿಸಿದ್ದಾರೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಪೊಲೀಸ್‌ ಇಲಾಖೆಯಷ್ಟು ಟೀಕೆ ಮತ್ತು ಅಪಹಾಸ್ಯಕ್ಕೆ ಒಳಗಾಗುವ ಇಲಾಖೆ ಬೇರೆ ಯಾವುದೂ ಇಲ್ಲ ಎನಿಸುತ್ತದೆ. ಮುಖ್ಯಮಂತ್ರಿಯಾಗಿ ಅನುಭವ ಪಡೆದವರೂ ಈ ರೀತಿ ಹೇಳಿಕೆ ನೀಡಿದರೆ, ಸಾರ್ವಜನಿಕರು ಮತ್ತು ಶ್ರೀಸಾಮಾನ್ಯರಿಗೆ ಪೊಲೀಸ್ ಇಲಾಖೆ ಬಗ್ಗೆ ಹೇಗೆ ವಿಶ್ವಾಸ ಮತ್ತು ನಂಬಿಕೆ ಮೂಡಲು ಸಾಧ್ಯ?

ಪಾಟೀಲರು ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿ ಶಾಸಕರಾಗಿ, ಮಂತ್ರಿಯಾಗಿ ಕೆಲಸ ನಿರ್ವಹಿಸಿ
ದ್ದಾರೆ. ಅಂತಹವರ ವಿರುದ್ಧ ರಾಜಕೀಯ ಟೀಕೆ ಮಾಡುವ ಬದಲು, ಅವರ ಹಿಂದಿನ ವೃತ್ತಿಯನ್ನೇ ಮುಂದಿಟ್ಟು ಟೀಕೆ ಮಾಡಿದರೆ, ಪೊಲೀಸರ ಬುದ್ಧಿ ಅನುಮಾನಾಸ್ಪದ ಅಥವಾ ನಂಬಿಕೆಗೆ ಅನರ್ಹ ಎಂಬಂತಹ ಭಾವನೆ ಸಹಜವಾಗಿಯೇ ಸಾರ್ವಜನಿಕರಲ್ಲಿ ಮೂಡುತ್ತದೆ.

-ತಿಮ್ಮೇಶ ಮುಸ್ಟೂರು,ಜಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.