ADVERTISEMENT

ಜಾತ್ಯತೀತ ಸಮಾಧಿ: ಶ್ಲಾಘನೀಯ ವಿಚಾರ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 17:59 IST
Last Updated 20 ಡಿಸೆಂಬರ್ 2019, 17:59 IST

ಲೋಕಸಭಾ ಸದಸ್ಯರಾಗಿದ್ದ ಜನಸಂಘದ ಓ.ಪಿ. ತ್ಯಾಗಿ ಅವರು ‘50 ವರ್ಷಗಳ ಹಿಂದೆ’ ಲೋಕಸಭೆ
ಯಲ್ಲಿ ಮಾತನಾಡುತ್ತಾ (ಪ್ರ.ವಾ., ಡಿ. 16), ದಿವಂಗತರಾಗುವ ರಾಷ್ಟ್ರೀಯ ನಾಯಕರ ಜಾತಿ, ಮತಗಳನ್ನು ಪರಿಗಣಿಸದೆ ಜಾತ್ಯತೀತ ಸಮಾಧಿಯೊಂದನ್ನು ನಿರ್ಮಿಸಬೇಕೆಂದು ಸಲಹೆ ನೀಡಿದ್ದಾರೆ. ಇದು, ಆ ಕಾಲಕ್ಕೆ ಸಮಯೋಚಿತವೂ ಶ್ಲಾಘನೀಯವೂ ಎನಿಸಿದೆ. ಬದ್ಧತೆಯಿಂದ ಕೂಡಿದ ಅವರ ಜಾತ್ಯತೀತ ನಿಲುವು ಇಂದಿನ ಬಿಜೆಪಿ (ಹಿಂದಿನ ಜನಸಂಘ) ರಾಷ್ಟ್ರೀಯ ನಾಯಕರಿಗೆ ಮಾದರಿಯಾಗಲಿ. ತ್ಯಾಗಿಯವರನ್ನು ವಾಜಪೇಯಿ, ಜಯ ಪ್ರಕಾಶ್ ನಾರಾಯಣ, ಕೆಂಗಲ್ ಹನುಮಂತಯ್ಯ ಅವರಂತಹ ಮುತ್ಸದ್ದಿಗಳ ಸಾಲಿನಲ್ಲಿ ಪರಿಗಣಿಸಬೇಕಾಗಿದೆ.

ಬಿಜೆಪಿ ಸೇರಿದಂತೆ ಎಲ್ಲಾ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಸಂವಿಧಾನದ ಆಶಯಗಳಾದ ಸೋದರತ್ವ, ಪ್ರಜಾಪ್ರಭುತ್ವ, ಜಾತ್ಯತೀತ ತತ್ವಗಳನ್ನು ಸಮಾಧಿ ಮಾಡಲು ಈಗ ಪೈಪೋಟಿಗೆ ಇಳಿದಿವೆ ಎಂದು ಹೇಳಲು ದುಃಖವಾಗುತ್ತದೆ. ಮುಂದಿನ ದಿನಗಳಲ್ಲಾದರೂ ದೇಶದ ಸುಶಿಕ್ಷಿತ ನಾಗರಿಕರು ಉತ್ತಮ
ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮೂಲಕ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಲಿ.

ಕೆ.ಎನ್.ಶಿವಶಂಕರ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.