ADVERTISEMENT

ವಾಚಕರ ವಾಣಿ|ಹಾಲಿ ಸದಸ್ಯರೇ ಸೂಕ್ತ

​ಪ್ರಜಾವಾಣಿ ವಾರ್ತೆ
Published 20 ಮೇ 2020, 20:15 IST
Last Updated 20 ಮೇ 2020, 20:15 IST

ಕೋವಿಡ್ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಮುಂದೂಡಲು ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ತಾತ್ಕಾಲಿಕವಾಗಿ ಆಡಳಿತ ಸಮಿತಿ ರಚಿಸಿ, ಚುನಾವಣೆಯಿಲ್ಲದೆ ಕಾರ್ಯಕರ್ತರನ್ನು ಸದಸ್ಯರನ್ನಾಗಿ ಮಾಡಲು ಅವಕಾಶ ಕಲ್ಪಿಸಿರುವುದು ಸರಿಯಲ್ಲ. ಚುನಾಯಿತ ಸದಸ್ಯರ ಸಂಖ್ಯೆಯಷ್ಟೇ ಆಡಳಿತ ಸಮಿತಿ ಸದಸ್ಯರನ್ನು ನೇಮಿಸುವುದೇ ಆದರೆ, ಈಗಿರುವ ಚುನಾಯಿತ ಸದಸ್ಯರನ್ನೇ ಆಡಳಿತ ಸಮಿತಿ ಸದಸ್ಯರನ್ನಾಗಿ ಮುಂದುವರಿಸಬಹುದು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಪಂಚಾಯಿತಿ ವ್ಯವಸ್ಥೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಕೆಲವು ಗ್ರಾಮ ಪಂಚಾಯಿತಿಗಳು ತಮ್ಮದೇ ಆದ ರೀತಿಯಲ್ಲಿ ಗಮನಾರ್ಹ ಕೆಲಸಗಳನ್ನು ಮಾಡುತ್ತಿವೆ ಹಾಗೂ ಗ್ರಾಮಸ್ಥರಲ್ಲಿ ಜನಜಾಗೃತಿ ಮೂಡಿಸಿವೆ. ಹೀಗಾಗಿ ಈ ವಿಷಯದಲ್ಲಿ ಅನುಭವ ಇರುವುದರಿಂದ ಹಾಲಿ ಅಧ್ಯಕ್ಷರು, ಸದಸ್ಯರನ್ನೇ ಕೆಲ ತಿಂಗಳವರೆಗೆ ಮುಂದುವರಿಸುವುದು ಗ್ರಾಮಗಳ ಹಿತದೃಷ್ಟಿಯಿಂದ ಸೂಕ್ತ ಎನಿಸುತ್ತದೆ.

-ಕೆ.ಜಿ.ಸರೋಜಾ ನಾಗರಾಜ್,ಪಾಂಡೋಮಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT