ADVERTISEMENT

ಒಕ್ಕೊರಲ ಧಿಕ್ಕಾರ ಇರಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 7 ಡಿಸೆಂಬರ್ 2020, 18:42 IST
Last Updated 7 ಡಿಸೆಂಬರ್ 2020, 18:42 IST

ಗ್ರಾಮ ಪಂಚಾಯಿತಿ ಸದಸ್ಯತ್ವವನ್ನು ಹಣ ನೀಡಿ ಪಡೆದುಕೊಳ್ಳಲು ಯತ್ನಿಸುತ್ತಿರುವ ವಿದ್ಯಮಾನವನ್ನು ತಿಳಿದು (ಪ್ರ.ವಾ., ಡಿ. 7), ವ್ಯವಸ್ಥೆಯ ಬಗ್ಗೆ ಹೇಸಿಗೆ ಎನಿಸಿತು. ತಹಶೀಲ್ದಾರ್ ಒಬ್ಬರು ತಮ್ಮ ಪತ್ನಿಯನ್ನು ಗ್ರಾಮ ಪಂಚಾಯಿತಿ ಸದಸ್ಯೆಯನ್ನಾಗಿ ಮಾಡಲು ₹ 25 ಲಕ್ಷ ನೀಡಲು ಮುಂದಾಗಿದ್ದಾರೆ ಎಂದರೆ, ಅದು ಅವರ ಪ್ರಾಮಾಣಿಕ ಸಂಪಾದನೆಯಂತೂ ಆಗಿರಲಾರದು. ನಿಜವಾಗಲೂ ಗ್ರಾಮಸೇವೆ ಮಾಡುವ ಹಂಬಲ ಇದ್ದರೆ, ಈಗ ತಮಗಿರುವ ಅಧಿಕಾರದಿಂದಲೇ ಗ್ರಾಮವನ್ನು ಉದ್ಧಾರ ಮಾಡಬಹುದು. ಹಣದಿಂದ ಸದಸ್ಯತ್ವ ಖರೀದಿಸುವುದಾದರೆ ಚುನಾವಣೆಯ ಅಗತ್ಯವಾದರೂ ಏನು?

ಇಂತಹ ಬೆಳವಣಿಗೆಗಳಿಗೆ ಅವಕಾಶ ಕೊಟ್ಟಲ್ಲಿ, ಮುಂದೆ ನಗರಸಭೆ ಸದಸ್ಯತ್ವ, ಸಂಸದ, ಶಾಸಕ ಸ್ಥಾನಗಳೂ ಆಯಾ ಕ್ಷೇತ್ರದ ಪ್ರಮುಖರಿಂದ ಹಣಕ್ಕೆ ಖರೀದಿಯಾಗುತ್ತವೆ. ಆಗ ಎಲ್ಲರೂ ಹಣ ಸಂಪಾದನೆಗೆ ಅಕ್ರಮ ದಾರಿ ಹುಡುಕಿಕೊಳ್ಳಲು ಸಮಾಜವೇ ರಹದಾರಿ ತೋರಿದಂತಾಗುತ್ತದೆ. ಈ ಅನಿಷ್ಟ ಬೆಳವಣಿಗೆಗೆ ಸಾರ್ವಜನಿಕರ ಒಕ್ಕೊರಲ ಧಿಕ್ಕಾರವಿರಲಿ.

- ಚಂದ್ರಶೇಖರ ಪುಟ್ಟಪ್ಪ,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.