ADVERTISEMENT

ವಾಚಕರ ವಾಣಿ: ತಪ್ಪಿತಸ್ಥರಲ್ಲಿ ನಾಚಿಕೆ ಮೂಡಿಸಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 18:58 IST
Last Updated 26 ಸೆಪ್ಟೆಂಬರ್ 2022, 18:58 IST

ದೇವರ ಗುಜ್ಜುಕೋಲು ಮುಟ್ಟಿದ್ದಕ್ಕೆ ಬಹಿಷ್ಕಾರ ಬೆದರಿಕೆಗಳನ್ನು ಎದುರಿಸುತ್ತಿರುವ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯ ಪ್ರಕರಣ ಸೇರಿದಂತೆ ಇಂಥ ಎಲ್ಲ ಅಸ್ಪೃಶ್ಯತೆಯ ಪ್ರಕರಣಗಳಲ್ಲಿ ತಪ್ಪಿತಸ್ಥರಾದವರ ಜಾತಿಯನ್ನು ನಿರ್ದಿಷ್ಟವಾಗಿ ಗುರುತಿಸಿ ವರದಿ ಮಾಡಬೇಕು. ಮೇಲ್ಜಾತಿ, ಸವರ್ಣೀಯರು ಇತ್ಯಾದಿ ಪದಗಳನ್ನು ಬಳಸುವುದು ಹೊಣೆಗೇಡಿತನ.

ಇಂಥ ಹೀನಕೃತ್ಯಗಳಲ್ಲಿ ಇಂತಹ ಜಾತಿಯವರು ಭಾಗಿಯಾಗಿದ್ದಾರೆ ಅನ್ನುವುದನ್ನು ಮುಲಾಜಿಲ್ಲದೆ ಹೇಳುವುದರ ಮೂಲಕ ಆಯಾಯ ಜಾತಿಯವರಲ್ಲಿ ನಾಚಿಕೆ ಮೂಡಿಸಬೇಕು. ಅದು ಯಾವುದೇ ಪತ್ರಿಕೆಯ ನೈತಿಕ ಹೊಣೆಗಾರಿಕೆಯೂ ಹೌದು.

⇒ವಿಕ್ರಂ ಹತ್ವಾರ್,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.