ADVERTISEMENT

ವಾಚಕರ ವಾಣಿ: ಪ್ರಜ್ಞಾವಂತರ ಗಮನಕ್ಕೆ ಬಾರದೇ?

ವಾಚಕರ ವಾಣಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 22:00 IST
Last Updated 3 ನವೆಂಬರ್ 2021, 22:00 IST

ಕರ್ನಾಟಕದಲ್ಲಿ ಅತ್ಯಗತ್ಯವಾಗಿರುವ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಮೂಡಿಬರುವ ಎಲ್ಲ ಅವಕಾಶಗಳು ಲಭ್ಯವಾಗಿದ್ದರೂ ಸ್ವಯಂಕೃತ ಅಪರಾಧಗಳಿಂದ ಜೆಡಿಎಸ್ ಪಕ್ಷವು ನಿರಂತರವಾಗಿ ಅದನ್ನು ಹಾಳುಮಾಡಿಕೊಳ್ಳುತ್ತಲೇ ಬಂದಿದೆ. ತಮ್ಮ ಕುಟುಂಬದವರಿಗೇ ಎಲ್ಲ ಸ್ಥಾನಗಳೂ ಲಭಿಸಬೇಕು ಎಂಬ ಸ್ವಾರ್ಥ ಆಲೋಚನೆಯಿಂದ ಆದಷ್ಟು ಬೇಗ ಹೊರಬರುವುದು ಅತ್ಯಗತ್ಯ. ಅಧಿಕಾರ ದೊರೆಯುವುದಾದರೆ ಯಾವ ಪಕ್ಷದೊಂದಿಗಾದರೂ ತ್ವರಿತ ಹೊಂದಾಣಿಕೆ ಮಾಡಿಕೊಂಡು ಅಷ್ಟೇ ಶೀಘ್ರವಾಗಿ ಹೊರಬಂದು ವರ್ಷಾನುಗಟ್ಟಲೆ ವೈರಿ ಎಂಬಂತೆ ಹಾದಿ ಬೀದಿಯಲ್ಲಿ ರಂಪಾಟ ಮಾಡುವುದು ಎಲ್ಲರೂ ಅಪಹಾಸ್ಯ ಮಾಡುವಂತಿದೆ.

ಸಾರ್ವಜನಿಕವಾಗಿ ನಾಲಗೆ ಹರಿಬಿಟ್ಟು, ತಾನು ಮಾತ್ರ ಬುದ್ಧಿವಂತ, ಬೇರೆಯವರೆಲ್ಲರೂ ಮೂರ್ಖರೆಂಬಂತೆ ಸಡಿಲವಾಗಿ ಮಾತಾಡುವುದು ಪ್ರಜ್ಞಾವಂತ ಮತದಾರರ ಗಮನಕ್ಕೆ ಬರುವುದಿಲ್ಲವೇ? ಮಾತು ಮಾತಿಗೆ ‘ಇವರ ಬಂಡವಾಳ ಬಯಲು ಮಾಡುತ್ತೇನೆ’ ‘ಅವರ ಜಾತಕ ಬಿಚ್ಚಿಡುತ್ತೇನೆ’ ಎಂದೆಲ್ಲ ಹೇಳುತ್ತಾ ಕೊನೆಗೆ ಮೌನವಾಗಿರುವುದನ್ನು ನೋಡಿ ನೋಡಿ ಜನರಿಗೂ ಸಾಕಾಗಿದೆ ಎಂಬ ಕಟು ಸತ್ಯ ಅರ್ಥಮಾಡಿಕೊಳ್ಳಬೇಕಾಗಿದೆ. ಇಲ್ಲವಾದರೆ ಫೀನಿಕ್ಸ್ ಹಕ್ಕಿಯಂತೆ ಎದ್ದು ಬರುತ್ತೇವೆ ಎಂಬುದು ಬರೀ ನಾಟಕೀಯ ಸಂಭಾಷಣೆಯಾದೀತು.

ಭರತ್ ಬಿ.ಎನ್.,ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.